Home News Gauribidanur ಪಿನಾಕಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಪಿನಾಕಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

0
Garubidanur river Dead Body

Gauribidanur : ಸೋಮವಾರ ಗೌರಿಬಿದನೂರು ತಾಲ್ಲೂಕಿನ ದೊಡ್ಡಕುರುಗೋಡು ಬಳಿರುವ ಪಿನಾಕಿನಿ ನದಿ( Pinakini River )ಯಲ್ಲಿ ಸೋಮವಾರ ಸುಮಾರು 48 ವರ್ಷದ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಪೊಲೀಸರು ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಿ ಸಂಬಂಧಿಕರಿಗಾಗಿ ಶೋದಿಸುತ್ತಿದ್ದಾರೆ.

ಸತತ ಒಂದು ವಾರದಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆ ಪಿನಾಕಿನಿ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ನದಿ ಪಾತ್ರದಲ್ಲಿನ ಸಾಕಷ್ಟು ಮನೆಗಳಲ್ಲಿದ್ದ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಈ‌ ವೇಳೆ ಮಹಿಳೆಯೊಬ್ಬರು ಪಿನಾಕಿನಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಹರಿಯುವ ನದಿ‌ ನೀರಿನಲ್ಲಿ ದೇಹವು ಕೊಚ್ಚಿ ಹೋಗಿ ಸೋಮವಾರ ನದಿ‌ ನೀರಿನಿಂದ ಹೊರಬಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ದಾಖಲಿಸಿಕೊಂಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version