Gauribidanur : ಆಟೋ ಹಾಗು ಕ್ಯಾಂಟರ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿ ಆರು ಜನ ಕಾಲೇಜು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಗೌರಿಬಿದನೂರಿನ ನಾಗಪ್ಪ ಬ್ಲಾಕ್ ಬಳಿ ಸಂಭವಿಸಿದೆ.
ವಿಧುರಾಶ್ವಥದಿಂದ ಗೌರಿಬಿದನೂರಿಗೆ ಬರುವ ಮಾರ್ಗ ಮದ್ಯೆ ಅಪಘಾತ ಸಂಭವಿಸಿದ್ದು ಗಾಯಾಳುಗಳು ಆಟೋದಲ್ಲಿ ಗೌರಿಬಿದನೂರಿನ ಕಾಲೇಜಿಗೆ ತೆರಳುತಿದ್ದ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ. ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದ್ದು ಅವರಲ್ಲಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಗೌರಿಬಿದನೂರಿನಿಂದ ಬೆಂಗಳೂರಿಗೆ ಕಳುಹಿಸಲಾಗಿದೆ. ಗಾಯಾಳುಗಳನ್ನು ಆಟೋ ಚಾಲಕ ಲೋಕೇಶ್, ಶ್ರೀನಿವಾಸ್, ವೆನ್ನೆಲಾ, ಸಹನ, ತ್ರಿವೇಣಿ, ಪವಿತ್ರ, ರೋಷಿಣಿ ಎಂದು ಗುರುತಿಸಲಾಗಿದೆ.
ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.