Gauribidanur : ಗೌರಿಬಿದನೂರು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಬಣದ ಪಾಲಾಗಿದೆ (CMC President Election). 31 ಸದಸ್ಯ ಬಲ ಹೊಂದಿರುವ ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್ 15, ಜೆಡಿಎಸ್ ಆರು, ಬಿಜೆಪಿ ಮೂರು, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಣ ಮತ್ತು ಪಕ್ಷೇತರ ಸೇರಿ ಏಳು ಸದಸ್ಯರು ಇದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಕೆ.ಎಚ್.ಪಿ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ 27ನೇ ವಾರ್ಡ್‌ನ ಲಕ್ಷ್ಮಿ ನಾರಾಯಣಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್‌ನ ಫರೀದ್ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸುಬ್ಬರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಮರ್‌ನಾಥ್ ಕಣದಲ್ಲಿದ್ದರು. ಲಕ್ಷ್ಮಿ ನಾರಾಯಣಪ್ಪ 17 ಮತ್ತು ಫರೀದ್ ತಲಾ 16 ಮತಗಳನ್ನು ಪಡೆದರು. ಕಾಂಗ್ರೆಸ್ ನ ಸುಬ್ಬರಾಜು ಮತ್ತು ಅಮರ್‌ನಾಥ್ ತಲಾ 13 ಮತಗಳನ್ನು ಪಡೆದು ಪರಾಜಿತರಾದರು.
ಫಲಿತಾಂಶ ಪ್ರಕಟ ಆಗುತ್ತಿದ್ದಂತೆಯೇ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಬೆಂಬಲಿಗರು ಮತ್ತು ಮುಖಂಡರು ನಗರಸಭೆ ಮುಂಭಾಗದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.