Gauribidanur : ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಮನೆಯಲ್ಲಿದ್ದ ಸಿಲಿಂಡರ್‌ನಿಂದ ಗ್ಯಾಸ್ (Cooking Gas Leak) ಸೋರಿಕೆಯಾಗಿ ಸ್ಫೋಟಗೊಂಡ (Burst) ಪರಿಣಾಮವಾಗಿ ವಾಸದ ಮನೆ ಧ್ವಂಸವಾಗಿದ್ದು, ಮನೆಯಲ್ಲಿದ್ದ ವಿನಯ್ ಮತ್ತು ನಂದಿನಿ ದಂಪತಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ. ಸ್ಫೋಟದ ಶಬ್ದ ಕೇಳಿದ ತಕ್ಷಣ ಹೊರಬಂದು ಸ್ಥಳೀಯರು ನೋಡುವಷ್ಟರಲ್ಲಿ ವಾಸವಿದ್ದ ಮನೆ ಸಂಪೂರ್ಣವಾಗಿ ನೆಲಸಮಗೊಂಡಿತ್ತು.
ಘಟನಾ ಸ್ಥಳಕ್ಕೆ CPI ಎಸ್.ಡಿ.ಶಶಿಧರ್, PSI ಚಂದ್ರಕಲಾ, ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದು ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದಿದ್ದು ತಜ್ಞರ ಪ್ರಕಾರ ಮನೆಯಲ್ಲಿ ರಾತ್ರಿ ಗ್ಯಾಸ್ ಸಿಲಿಂಡರ್‌ನಿಂದ ಹೊರಬಂದಿರುವ ಗ್ಯಾಸ್ ಮನೆಯನ್ನು ಆವರಿಸಿ ಸಣ್ಣ ಕಿಡಿಯಿಂದ ಇಡೀ ಮನೆ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.