Gauribidanur : ಐ.ಕ್ಯೂ.ಎಸ್.ಸಿ ಸಹಯೋಗದೊಂದಿಗೆ ಗೌರಿಬಿದನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ (Economics) ವಿಭಾಗದಿಂದ ಕಾಲೇಜಿನ ಪ್ರಾಂಶುಪಾಲ ಎಂ.ಶಿವಣ್ಣ ರವರ ‘ಮೂಲ ಆರ್ಥಶಾಸ್ತ್ರ’ ಹಾಗೂ ‘ಸೂಕ್ಷ್ಮ ಅರ್ಥಶಾಸ್ತ್ರ’ ಎಂಬ ಎರಡು ಪುಸ್ತಕಗಳನ್ನು (Books) ಗುರುವಾರ ಕಾಲೇಜಿನಲ್ಲಿ ಬಿಡುಗಡೆಗೊಳಿಸಲಾಯಿತು (Release). ಎಇಎಸ್ ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಗಾಯತ್ರಿ, ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಎ.ಸುದರ್ಶನ್ ಮತ್ತು ಕರುನಾಡು ಕನ್ನಡಿಗರ ವೇದಿಕೆ ಅಧ್ಯಕ್ಷ ಜಿ.ಬಾಲಾಜಿ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಮಾತಾನಾಡಿದ ಕಾಲೇಜಿನ ಪ್ರಾಂಶುಪಾಲ ಎಂ.ಶಿವಣ್ಣ ” ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಸರಳ ಭಾಷೆಯಲ್ಲಿ ಈ ಪುಸ್ತಕಗಳನ್ನು ರಚಿಸಲಾಗಿದ್ದು ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ಸುಲಭವಾಗಿ ಅರ್ಥವಾಗಲು ರೇಖಾಚಿತ್ರ ಮತ್ತು ಗಣಿತ ಬಳಸಲಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ವೆಂಕಟಾಚಲಪತಿ, ಕನ್ನಡ ವಿಭಾಗದ ಮುಖ್ಯಸ್ಥರಾದ ರಮೇಶಚಂದ್ರ ದತ್ತ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಜಾತ, ಜಿಲ್ಲೆಯ ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.