Home News Gauribidanur ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0
Gauribidanur Uniform Distribution

Gauribidanur : ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಒಂದನೇ ತರಗತಿಯ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಜಿ .ಪಂ ಮಾಜಿ ಸದಸ್ಯರಾದ ಕೆ.ಕೆಂಪರಾಜು ಎರಡು ಜೊತೆ Uniform ಮತ್ತು Shoe, Socks ಗಳನ್ನು ವಿತರಣೆ ಮಾಡಿದರು.

‘ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡಲು ಎಲ್ಲರೂ ಸಹಕರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವನೆಗೆ ಸಹಕಾರಿಯಾಗುವ ಸಲುವಾಗಿ ಶಾಲೆಯ ಎಲ್ಲ ಮಕ್ಕಳಿಗೂ ಉಚಿತವಾಗಿ ತಟ್ಟೆ-ಲೋಟಗಳನ್ನು ಹಾಗೂ ಕಲಿಕೆಗೆ ನೆರವಾಗಲು ಹಸಿರು ಮತ್ತು ಕಪ್ಪುಹಲಗೆ, ತಂತ್ರಜ್ಞಾನದೊಂದಿಗೆ ಕಲಿಯಲು ಶಾಲೆಗೆ ಒಂದು ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ನೀಡಲಾಗುವುದು’ ಎಂದು‌ ಕೆ.ಕೆಂಪರಾಜು ತಿಳಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ಚಂದ್ರಕಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಪ್ಸರ್ ಬಾಷಾ, ಮುಖ್ಯಶಿಕ್ಷಕ ಶ್ರೀರಾಮರೆಡ್ಡಿ, ಶಿಕ್ಷಕರಾದ ನಾರಾಯಣಪ್ಪ, ಕಮಲಮ್ಮ, ಕೃಷ್ಣವೇಣಿ, ದೇವರಾಜ್, ಶಿಲ್ಪ, ರೂಪ, ಷಾನಾಜ್, ನಾಗಮಣಿ, ಮುಖಂಡರಾದ ಗಂಗಾಧರಪ್ಪ‌ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version