Gauribidanur : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರ ಕಸಬಾ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Hobli Level Kannada Sahitya Sammelana) ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಆಯೋಜಿಸಲಾಗಿತ್ತು. ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಎನ್.ಎಂ.ಚಿನ್ನಪ್ಪರೆಡ್ಡಿ, ಭಾರತ ಸೇವಾದಳದ ಬಿ.ಎನ್.ಶ್ರೀನಿವಾಸಮೂರ್ತಿ, ಗ್ರಾ.ಪಂ ಅಧ್ಯಕ್ಷ ಶಿವಶಂಕರಪ್ಪ, ಕಸಾಪ ಅಧ್ಯಕ್ಷ ಟಿ.ನಂಜುಂಡಪ್ಪ ಅವರು ವಿದುರಾಶ್ವತ್ಥದಲ್ಲಿನ ಸ್ವಾತಂತ್ರ್ಯ ಯೋಧರ ಸ್ತೂಪಗಳಿಗೆ ಪುಷ್ಪನಮನ ಸಲ್ಲಿಸಿದ ನಂತರ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎನ್.ಆರ್.ಚಂದ್ರಶೇಖರ್ ರೆಡ್ಡಿ ಈ ಸಂಧರ್ಭದಲ್ಲಿ ಮಾತನಾಡಿ “ರಾಜ್ಯದ ಗಡಿಭಾಗವಾಗಿದ್ದರೂ ಕೂಡ ಇಲ್ಲಿ ಭಾಷೆಯ ಹೆಸರಿನಲ್ಲಿ ಯಾವುದೇ ಗದ್ದಲವಿಲ್ಲ, ಕನ್ನಡವು ಈ ಭಾಗದ ತೆಲುಗು ಭಾಷೆಯಲ್ಲಿ ಬೆರೆತಿದ್ದು ಎಲ್ಲರಲ್ಲೂ ಸಾಮರಸ್ಯದ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಕಲೆಗಳ ಸಂವರ್ಧನೆಗಾಗಿ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಿಕೊಂಡು ಬರುತ್ತಿದೆ” ಎಂದು ತಿಳಿಸಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ನಂಜುಂಡಪ್ಪ, ಸಾಹಿತಿ ಡಿ.ಎಸ್.ಹನುಮಂತರಾವ್, ವಿಜ್ಞಾನಿ ಡಾ.ಕೆ.ಪಿ.ಜೆ.ರೆಡ್ಡಿ, ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ.ಮರಿರಾಜು, ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ಡಿ.ಅಶ್ವತ್ಥರೆಡ್ಡಿ, ಬಾಬುರೆಡ್ಡಿ, ವೇಣುಗೋಪಾಲರೆಡ್ಡಿ, ರಂಗರಾಜು, ಕೆ.ವಿ.ಪ್ರಕಾಶ್, ಆರ್.ರಾಣಾಪ್ರತಾಪ್, ಕೆ.ಮದ್ದಿಲೇಟಿ, ಎನ್.ಜಿ.ರೆಡ್ಡಪ್ಪ, ನಾಗರಾಜಪ್ಪ, ಕೆ.ವಿ.ಪ್ರಕಾಶ್, ಶೈಲಜಾ ಸಪ್ತಗಿರಿ, ಓಬಳೇಶ್, ಅನ್ಸಾರಿ, ಕೆ.ರಾಮಾಂಜನೇಯಲು, ಎಸ್.ವಿ.ಕೃಷ್ಣಕುಮಾರಿ, ಪಿ.ವಿ.ಸುವರ್ಣಮ್ಮ, ಚಂದ್ರಮೌಳಿ, ಪ್ರಭಾಕರ್, ಸಿದ್ದಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.