Home Gauribidanur ಕರ್ನಾಟಕ ಜಾನಪದ ಪರಿಷತ್ತಿನ ಮಂಚೇನಹಳ್ಳಿ ಘಟಕ ಉದ್ಘಾಟನೆ

ಕರ್ನಾಟಕ ಜಾನಪದ ಪರಿಷತ್ತಿನ ಮಂಚೇನಹಳ್ಳಿ ಘಟಕ ಉದ್ಘಾಟನೆ

0
Gauribidanur Karnataka Janapada Parishat Manchenahalli Inauguration at Sri Venkateshwara PU College

Gauribidanur : ಶನಿವಾರ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಯ ಶ್ರೀ ವೆಂಕಟೇಶ್ವರ ಪ್ರಥಮದರ್ಜೆ ಕಾಲೇಜಿನಲ್ಲಿ (Sri Venkateshwara PU College) ಕರ್ನಾಟಕ ಜಾನಪದ ಪರಿಷತ್ತಿನ (Karnataka Janapada Parishat, Manchenahalli) ಮಂಚೇನಹಳ್ಳಿ ಘಟಕವನ್ನು ಉದ್ಘಾಟಿಸಲಾಯಿತು.

ಇಂದಿನ ಯುವಜನಾಂಗಕ್ಕೆ ಜಾನಪದ ಸಾಹಿತ್ಯದ ಬಗ್ಗೆ ಪರಿಷತ್ತಿನ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ. ಹಿಂದ ಕಾಲದಲ್ಲಿ ಸೊಗಸಾಗಿದ್ದ ಈ ಕಲೆ ಆಧುನಿಕ ಯುಗದಲ್ಲಿ ನಶಿಸುತ್ತಿದ್ದೆ. ನಾಡಿನಲ್ಲಿ ಜನಪದ ಉಳಿದರೆ ದೇಶದ ನಾಗರಿಕತೆ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಘಟಕದ ಗೌರವಾಧ್ಯಕ್ಷ ಸಾ.ನಾ. ಲಕ್ಷ್ಮಣ್ ಗೌಡ ತಿಳಿಸಿದರು.

ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಎನ್. ಕಿರಣ್ ಕುಮಾರ್ ಮಾತನಾಡಿ, ಮಕ್ಕಳು ಜಾನಪದ ಗೀತೆಗಳನ್ನು ಹಾಡಲು ಪ್ರೇರೇಪಿಸಲು ಶಾಲೆಗೊಂದು ಜಾನಪದ ಕಾರ್ಯಕ್ರಮ ಮಾಡುವ ಆಲೋಚನೆ ಹೊಂದಿದ್ದೇವೆ. ಹಳ್ಳಿಗಳಲ್ಲಿ ಜಾನಪದ ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಉಷಾ ಶ್ರೀನಿವಾಸ್ ಬಾಬು, ನಾಗೇಂದ್ರಬಾಬು, ಅವಲಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಪ್ರಭಾ ನಾರಾಯಣಗೌಡ, ರೈತ ಮುಖಂಡರಾದ ಎಂ.ಆರ್. ಲಕ್ಷ್ಮಿನಾರಾಯಣ್, ಶ್ರೀವೆಂಕಟೇಶ್ವರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಜೆ.ವಿ. ಸುರೇಶ್, ಕಜಾಪ ಜಿಲ್ಲಾ ಕಾರ್ಯದರ್ಶಿ ಜನಾರ್ದನ್, ತಾಲ್ಲೂಕು ಮಾಧ್ಯಮ ಕಾರ್ಯದರ್ಶಿ ಪಿ.ವಿ. ಚೇತನ್, ಮಂಜುನಾಥ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version