Gauribidanur : ಗೌರೀಬಿದನೂರು ನಗರದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat – KaSaPa) ಘಟಕದಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ (President) ಸ್ಥಾನದ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದೇ ಸ್ಥಾನಕ್ಕೆ ಇಬ್ಬರನ್ನು ನೇಮಕ ಮಾಡುವ ಮೂಲಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ (Prof. Kodi Rangappa) ಅವರು ಗೊಂದಲಗಳಿಗೆ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಟಿ.ನಂಜುಂಡಪ್ಪ, ಆರ್.ಜಿ.ಜನಾರ್ದನ ಮೂರ್ತಿ, ಬಿ.ಸಂಜೀವರಾಯಪ್ಪ, ಬಾಲಪ್ಪ, ರಾಣಾಪ್ರತಾಪ್, ಎಚ್.ಎಲ್.ವಿ.ವೆಂಕಟೇಶ್, ಸಿ.ಕೆ.ಆದರ್ಶಕುಮಾರ್, ಎ.ಬಿ.ಶೈಲಜಾ, ವೈ.ಎನ್.ಅಂಬಿಕಾ, ಎಚ್.ಎನ್.ರಾಮಕೃಷ್ಣ ಸೇರಿದಂತೆ 11 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪರಿಶೀಲಿಸುವಂತೆ ಜಿಲ್ಲಾದ್ಯಕ್ಷರಿಗೆ ಮನವಿ ಮಾಡಿದ್ದರು. ಈ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಅವರು ಕಸಾಪ ಸದಸ್ಯರ ಸಭೆಯನ್ನು ಕರೆದು ಸಭೆಯ ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಸರನ್ನು ಸೂಚಿಸುವಂತೆ ತಿಳಿಸಿ ನಂತರ ಐದು ವರ್ಷದ ಅವಧಿಗೆ ತಲಾ ಎರಡೂವರೆ ವರ್ಷಕ್ಕೆ ಒಬ್ಬರಂತೆ ಟಿ.ನಂಜುಂಡಪ್ಪ ಹಾಗೂ ಆರ್.ಜಿ.ಜನಾರ್ದನಮೂರ್ತಿ ಅವರನ್ನು ಆಯ್ಕೆ ಮಾಡಿರುವುದಾಗಿ ಜಿಲ್ಲಾಧ್ಯಕ್ಷರು ಸಭೆಗೆ ತಿಳಿಸಿದಕ್ಕೆ ಕಸಾಪ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಇಬ್ಬರಲ್ಲಿ ಮೊದಲ ಅರ್ಧ ಅವಧಿಗೆ ಯಾರು ಅಧ್ಯಕ್ಷರು ಎಂಬುದನ್ನು ನಿರ್ಧರಿಸಿ ಮುಂದಿನ ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿ ಜಿಲ್ಲಾಧ್ಯಕ್ಷರು ಗೊಂದಲಗಳಿಗೆ ತಾತ್ಕಾಲಿಕ ತೆರೆ ಎಳೆದರು. ಇದರಿಂದ ಸಾಕಷ್ಟು ಮಂದಿ ಅಸಮಾಧಾನಗೊಂಡು ಸಭೆಯಿಂದ ಹೊರ ನಡೆದರು.
ಆರ್.ವೀರಣ್ಣ, ವಿ.ರವೀಂದ್ರನಾಥ್, ಎಲ್.ಹನುಮಂತರಾವ್, ವೇಣು, ಆರ್.ಅಶೋಕ್ ಕುಮಾರ್, ಡಿ.ಜೆ.ಚಂದ್ರಮೋಹನ್, ಉಷಾ ಶ್ರೀನಿವಾಸ್, ಮಲ್ಲಿಕಾರ್ಜುನ್, ಕೆ.ರಾಮಾಂಜನೇಯಲು, ದಸ್ತಗಿರ್ ಸಾಬ್, ಗಿರಿಧರ್, ಪ್ರವೀಣ್, ರಾಜಶೇಖರ್, ಶ್ರೀಧರ್, ಲಕ್ಷ್ಮಿನಾರಾಯಣ್, ಲಕ್ಷ್ಮಿಪತಿ, ಲಿಂಗಪ್ಪ, ಕಲಾವಿದ ರಾಮಕೃಷ್ಣ, ನದಿದಡ ಪರಮೇಶಿ, ಎನ್.ಸಿದ್ದರಾಮಯ್ಯ, ಓಬಳೇಶ್, ವಿ.ಟಿ.ವೆಂಕಟೇಶ್, ರಾಮಚಂದ್ರರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.