Gauribidanur : ಶುಕ್ರವಾರ ಗೌರಿಬಿದನೂರು ನಗರದ ನ್ಯಾಯಲಯ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ‘ವಕೀಲರ ದಿನಾಚರಣೆ’ ಕಾರ್ಯಕ್ರಮವನ್ನು ಹಿರಿಯ ನ್ಯಾಯಧೀಶರಾದ ರೇಣುಕಾ ದೇವಿದಾಸ್ ರಾಯ್ಕರ್ ಉದ್ಘಾಟಿಸಿದರು.
ಉದ್ಘಾಟನೆ ನಂತರ ಮಾತನಾಡಿದ ನ್ಯಾಯಧೀಶರು ” ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ವಕೀಲರ ವೃತ್ತಿ ಕೂಡಿದೆ. ವೃತ್ತಿ ಪಾವಿತ್ರ್ಯವನ್ನು ಉಳಿಸುತ್ತ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ವಕೀಲರು ಮಾಡಬೇಕಾಗಿದೆ. ಕಕ್ಷಿದಾರರ ಮನವೊಲಿಸಿ ರಾಜೀ ಸಂಧಾನದ ಮೂಲಕ ಅವರ ಸಮಯ ಹಾಗೂ ಹಣ ಉಳಿಸಿ ಮಾನವ ಸಂಬಂಧಗಳನ್ನು ವಕೀಲರು ಉಳಿಸಬೇಕಾಗಿದೆ. ಕಾನೂನು ಪ್ರಾಧಿಕಾರ ಆಯೋಜನೆ ಮಾಡುವ ಮೆಗಾ ಅದಾಲತ್ ಅನ್ನು ಯಶಸ್ವಿಗೊಳಿಸುವಲ್ಲಿ ವಕೀಲರ ಪಾತ್ರ ಬಹು ಮುಖ್ಯವಾದುದು ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಮುನಿಶಾಮಿ ರೆಡ್ಡಿ, ಎಂ.ಆರ್. ಲಕ್ಷ್ಮೀನಾರಾಯಣ್, ನಾಗೇಂದ್ರ ಕುಮಾರ್, ಅಶೋಕ್ ಕುಮಾರ, ಸಣ್ಣಕ್ಕಿ ವೆಂಕಟರಮಣಪ್ಪ ಅವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಡಿ.ರಾಮದಾಸ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪಿ.ಎಂ. ಸಚಿನ್, ವಕೀಲರ ಸಂಘದ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷ ಬಿ. ಲಿಂಗಪ್ಪ, ಖಜಾಂಚಿ ಆನಂದ್, ಶಂಕರಪ್ರಸಾದ್, ಪಾರ್ಶ್ವನಾಥ್, ಬಿ.ಕೆ. ನರಸಿಂಹಮೂರ್ತಿ, ಟಿ.ಕೆ. ವಿಜಯರಾಘವ, ಎನ್. ನಾಗರಾಜು, ಆದಿನಾರಾಯಣಗೌಡ, ಕೋಮಲ, ಎಚ್.ಎಲ್. ವೆಂಕಟೇಶ್, ರಂಗನಾಥ್, ಸಿ.ಎಸ್. ರಾಮಚಂದ್ರರೆಡ್ಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur