Gauribidanur : ಗೌರಿಬಿದನೂರು ತಾಲ್ಲೂಕಿನ S N ಹೊಸೂರು (S N Hosur) ಬಸ್ ನಿಲ್ದಾಣದಲ್ಲಿ (Bus Stop) ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾದ ತಂಗುದಾಣವನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (MLA N. H. Shivashankara Reddy) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ” ಗ್ರಾಮದಿಂದ ನಿತ್ಯ ನೂರಾರು ಮಂದಿ ಪ್ರಯಾಣಿಕರು ನಗರ ಪ್ರದೇಶಗಳಿಗೆ ತೆರಳುತ್ತಿದ್ದು, ಇವರ ಅನುಕೂಲಕ್ಕಾಗಿ ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ಬಹುದಿನಗಳ ಬೇಡಿಕೆಯಾಗಿದ್ದ ಈ ತಂಗುದಾಣ ನಿರ್ಮಿಸಲು ಸ್ಥಳೀಯರು ಸಾಕಷ್ಟು ಸಹಕಾರ ನೀಡಿದ್ದಾರೆ. ಈ ನಿಟ್ಟಿನಲ್ಲಿ ತಂಗುದಾಣಕ್ಕೆ ದಾಸ ಸುಬ್ಬಮ್ಮ ಮತ್ತು ದಾಸಾ ನಾಗಪ್ಪ ಅವರ ಹೆಸರನ್ನು ಇಡಲಾಗಿದ್ದು ಇವರ ಸ್ಮರಣಾರ್ಥವಾಗಿ ಅವರ ಕುಟುಂಬದವರಾದ ಡಿ.ಎನ್.ಆನಂದ್ ಅವರ ಸಹಕಾರ ಉತ್ತಮವಾಗಿದೆ” ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷರಾದ ಸತ್ಯನಾರಾಯಣ, ಮುಖಂಡರಾದ ಬೊಮ್ಮಣ್ಣ, ನಾಗಪ್ಪ, ನರಸಿಂಹಮೂರ್ತಿ, ತಿಮ್ಮರಾಜು, ತಾರಾನಾಥ್, ತಿರುಮಲೇಶ್, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur