Chintamani : ಚಿಂತಾಮಣಿ ನಗರದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು (Gender Minority) ಮಂಗಳವಾರ ವಿಶ್ವದಿಂದ ಕೊರೊನಾ ತೊಲಗಲಿ ಎಂದು ಓಂ ಶಕ್ತಿ (Om Shakthi) ಮಾಲೆ ಧರಿಸಿ ದೀಪೋತ್ಸವ ಮಾಡಿ ಗಂಗಮ್ಮ ಮತ್ತು ಯಲ್ಲಮ್ಮನಿಗೆ ವಿಶೇಷ ಪೂಜೆ (Pooja) ಸಲ್ಲಿಸಿದರು.
ತಮಿಳುನಾಡು ಶೈಲಿಯಲ್ಲಿ ಸೀರೆಯುಟ್ಟು ಮುಖಕ್ಕೆ ಅರಿಶಿನ ಹಚ್ಚಿಕೊಂಡಿದ್ದ ಲಿಂಗತ್ವ ಅಲ್ಪ ಸಂಖ್ಯಾತರು ಶ್ರೀರಾಮನಗರದ ಮಂಗಳಮುಖಿ ದೊಡ್ಡಮನೆ ಸೈಯದ್ ಸಲ್ಮಾ ಮನೆಯಿಂದ ವಿಶಿಷ್ಟವಾಗಿ ಕಟ್ಟಿದ್ದ ಮಲ್ಲಿಗೆ ಹೂವಿನ ದಂಡೆಗಳಿಂದ ಅಲಂಕರಿಸಿಕೊಂಡು, ಹಣೆಯಲ್ಲಿ ಕುಂಕುಮವಿಟ್ಟು ತಲೆಯಮೇಲೆ ಹೂವಿನ ಕರಗ ಹೊತ್ತು ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೈಯದ್ ಸಲ್ಮಾ “ದೇಶದ ಜನರು ಸುಖ,ಶಾಂತಿ, ನೆಮ್ಮದಿಯಿಂದ ಬಾಳಿ ಎಲ್ಲರಿಗೂ ಆರೋಗ್ಯ, ಐಶ್ವರ್ಯ ನೀಡಿ ಸುಗಮವಾಗಿ ಜೀವನ ಸಾಗಿಸಲು ಸಹಾಯ ಮಾಡಲಿ ಎಂದು ಹರಕೆಯನ್ನು ಹೊತ್ತು ಇಂದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು” ಎಂದರು.
ಕಾರ್ಯಕ್ರಮದಲ್ಲಿ ಸುಭದ್ರಾನಾಯಕ್, ಪ್ರಿಯಾಶಕ್ತಿ, ಅನಿತಾಶಕ್ತಿ, ಸಂಗೀತಪೂನಂ, ಶೃತಿ, ಬಿಂದು, ಮಂಜು, ಚಿಕ್ಕಸಲ್ಮಾ, ಅಶ್ವಿನಿ ಉಪಸ್ಥಿತರಿದ್ದರು.