Gudibande : ಗುರುವಾರ ಬೆಳಗ್ಗೆ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ಕಡೇಹಳ್ಳಿ ಗ್ರಾಮದಲ್ಲಿ Congress ಪಕ್ಷದ ಮುಖಂಡ (Leader) ಆನಂದರೆಡ್ಡಿ ಅವರ ಮೇಲೆ ರಾಜಕೀಯ ವೈಷಮ್ಯಯ ಕಾರಣದಿಂದ ಹಲ್ಲೆ (Assault) ನಡೆದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಭಂದಿಸಿದಂತೆ ಆನಂದ್ ಅವರ ಸಂಬಂಧಿಕರ ದೂರಿನ ಅನ್ವಯ ಗುಡಿಬಂಡೆ ಪೋಲಿಸರು ಕೇಸು ದಾಖಲಿಸಿಕೊಂಡು ಹಲ್ಲೆ ಮಾಡಿದ ವಿಷ್ಣುವರ್ಧನ ಅವರನ್ನು ಬಂಧಿಸಿದ್ದಾರೆ.
ಗುರುವಾರ ಮುಂಜಾನೆ ಕುಡಿದ ಅಮಲಿನಲ್ಲಿದ್ದ ವಿಷ್ಣುವರ್ಧನ ರೆಡ್ಡಿ ಗ್ರಾಮದ ಬಸ್ ನಿಲ್ದಾಣದ ಅಂಗಡಿ ಬಳಿ ಸೀಗರೇಟು ಕೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ಆನಂದ ರೆಡ್ಡಿ ಮತ್ತು ವಿಷ್ಣುವರ್ಧನ ನಡುವ ಮಾತಿನ ಚಕಮಕಿ ನಡೆದಿದ್ದು ಈ ಸಂದರ್ಭದಲ್ಲಿ ವಿಷ್ಣುವರ್ಧನ ಏಕಾಏಕಿ ಚಾಕು ತೆಗೆದು ಆನಂದ ರೆಡ್ಡಿ ದೇಹದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ, ಅಕ್ಕಪಕ್ಕದ ಜನರು ಧಾವಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆನಂದ್ ಅವರನ್ನು ಗುಡಿಬಂಡೆ ಸಾರ್ವಜನಿಕ ಅಸ್ಪತ್ರೆಗೆ ದಾಖಲು ಮಾಡಿದ್ದ ನಂತರ ಹೆಚ್ಚಿನ ಚಿಕಿಸ್ಸೆಗಾಗಿ ಜಿಲ್ಲಾ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.