Gudibande : ಗುಡಿಬಂಡೆ ತಾಲ್ಲೂಕಿನಾದ್ಯಂತ Covid-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತುರ್ತು ಕೆಲಸವಿದ್ದವರಿಗೆ ಮಾತ್ರವೇ ತಾಲ್ಲೂಕು ಕಚೇರಿ (Taluk Office / Sub Registrar Office) ಪ್ರವೇಶ ನೀಡಲಾಗಿದ್ದು ಕಚೇರಿಗೆ ಅನಗತ್ಯವಾಗಿ ಬರುವವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ತಹಶೀಲ್ದಾರ್ ಸಿಗಬತ್ ಉಲ್ಲಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರರು “ಜಿಲ್ಲೆಯಲ್ಲಿ Covid-19 ಮೂರನೇ ಅಲೆ ಕಾಣಿಸಿಕೊಂಡಿದ್ದು ತಾಲ್ಲೂಕಿನಲ್ಲಿ 94 Coroanavirus ಸಕ್ರಿಯ ಪ್ರಕರಣಗಿವೆ. ಕೆಲಸವಿಲ್ಲದೇ ಕೆಲವರು ಸುಮ್ಮನೆ ತಾಲ್ಲೂಕು ಕಚೇರಿಗೆ ಬರುವುದರಿಂದ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು ಅಂತಹವರನ್ನು ಗೇಟ್‌ನಲ್ಲಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಜೊತೆಗೆ ಕೆಲಸದ ನಿಮಿತ್ತ ಬರುವಂತಹ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲನೆ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತಿದ್ದಾರೆ. ಸಾರ್ವಜನಿಕರು ಸಹ ಇದನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು” ಎಂದು ಹೇಳಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur