Tuesday, April 16, 2024
HomeSidlaghattaಸಂಪಾದನೆಯಷ್ಟೆ ಪ್ರಾಮುಖ್ಯತೆಯನ್ನು ಉಳಿತಾಯಕ್ಕೂ ನೀಡಬೇಕಿದೆ

ಸಂಪಾದನೆಯಷ್ಟೆ ಪ್ರಾಮುಖ್ಯತೆಯನ್ನು ಉಳಿತಾಯಕ್ಕೂ ನೀಡಬೇಕಿದೆ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ (Government Junior College) NSS ಘಟಕದಿಂದ ತಾಲ್ಲೂಕಿನ ದ್ಯಾವಪ್ಪನಗುಡಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಬಿರದ ಸಮಾರೋಪ ಸಮಾರಂಭದಲ್ಲಿ SBI ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ರಾಮಕೃಷ್ಣೇಗೌಡ ಮಾತನಾಡಿದರು.

ನಮ್ಮೆಲ್ಲರ ಬದುಕಿನಲ್ಲೂ ಸಂಪಾದನೆ ಎಷ್ಟು ಮುಖ್ಯವೋ ಉಳಿತಾಯಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಆಗಲೇ ಆರ್ಥಿಕ ಸಮತೋಲನೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಯಾರೇ ಆಗಲಿ ಎಲ್ಲರೂ ಸಹ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳದೆ ಇದ್ದಲ್ಲಿ ಸುಖಮಯ ಜೀವನ ನಡೆಸಲು ಕಷ್ಟವಾಗುತ್ತದೆ. ಎಲ್ಲರ ಬದುಕಿನಲ್ಲೂ ಉಳಿತಾಯ ಮನೋಭಾವ ಮುಖ್ಯವಾಗುತ್ತದೆ ಎಂದರು.

ಪ್ರಧಾನಿ ಮೋದಿ ಅವರು ಜಾರಿಗೆ ತಂದ ಶೂನ್ಯ ಖಾತೆ ಇನ್ನಿತರೆ ಯೋಜನೆಗಳಿಂದ ಗ್ರಾಮೀಣ ಭಾಗದ ಅನೇಕರು ಬ್ಯಾಂಕ್ ವ್ಯಾಪ್ತಿಗೆ ಒಳಪಟ್ಟರು. ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ಆರಂಭಿಸಿದ್ದು ಆರ್ಥಿಕ ಶಿಸ್ತು ಬಗ್ಗೆ ಅರಿವು ಮೂಡಿದೆ ಎಂದು ಹೇಳಿದರು.

ಬ್ಯಾಂಕ್‌ನಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.

 ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆಯ ಅಶೋಕ್ ಅವರು ಬೆಂಕಿ ಅವಘಡಗಳು ಸಂಭವಿಸಿದಾಗ ಎದುರಿಸಬೇಕಾದ ಕ್ರಮ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತಿಳಿಸಿಕೊಟ್ಟರು.

ಪಶುಪಾಲನ ಇಲಾಖೆಯ ಸಹಾಯಕ ನಿದೇಶಕ ಡಾ.ರಮೇಶ್ ಅವರು ಪಶುಪಾಲನೆ ರೇಬಿಸ್ ರೋಗವನ್ನು ತಡೆಗಟ್ಟುವ ಕ್ರಮಗಳು ಬಗ್ಗೆ ಹಾಗೂ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.

ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾಬೈರೇಗೌಡ, ಅಗ್ನಿಶಾಮಕ ಠಾಣಾಕಾರಿ ರಾಮಕೃಷ್ಣಪ್ಪ ಎನ್‌ಎಸ್‌ಎಸ್ ಕಾರ್ಯಕ್ರಮಾಕಾರಿ ಎಚ್.ಸಿ.ಮುನಿರಾಜು, ಪಿಡಿಒ ವಜ್ರೇಶ್ ಕುಮಾರ್, ಮುಖ್ಯ ಶಿಕ್ಷಕ ಜೀವೇಂದ್ರಕುಮಾರ್, ಉಪನ್ಯಾಸಕರಾದ ಚಂದ್ರಶೇಖರ್, ರಮೇಶ್ ಹಾಜರಿದ್ದರು.

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!