Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ (Kaiwara) ಅಮರನಾರೇಯಣಸ್ವಾಮಿ ಬ್ರಹ್ಮ ರಥೋತ್ಸವ (Amaranareyana Swamy Temple Brahma Rathotsava) ಮಾರ್ಚ್ 18 ಶುಕ್ರವಾರ ಬೆಳಗ್ಗೆ 10:15 ಕ್ಕೆ ಮತ್ತು ಮಾರ್ಚ್ 19 ರಂದು ಶನಿವಾರ ಮಧ್ಯಾಹ್ನ 12:30 ಕ್ಕೆ ಯೋಗಿನಾರೇಯಣ ಯತೀಂದ್ರರ ರಥೋತ್ಸವ (Sri Yogi Naraeyana Yatindra Rathotsava) ನಡೆಯಲಿದೆ.
ಈಗಾಗಲೇ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು 18 ದಿನಗಳ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನವು ರಾತ್ರಿ ವಿಶೇಷ ಶೇಷವಾಹನೋತ್ಸವ, ಗರುಡೋತ್ಸವ, ಚಿತ್ರಗೋಪುರೋತ್ಸವ ಮುಂತಾದ ಹಲವಾರು ವಾಹನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ರಾತ್ರಿ10 ಕ್ಕೆ ಶ್ರೀಮತಿ ರಮಾದೇವಿ ಮತ್ತು ಕ್ಕೆ ತಂಡದವರಿಂದ ಹರಿಕಥೆ ಮತ್ತು ರಾತ್ರಿ 2 ಕ್ಕೆ ವಿ.ವಿ.ಗುರು ಮತ್ತು ತಂಡದವರಿಂದ ಬುರ್ರಕಥೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಶನಿವಾರ ರಾತ್ರಿ ದಸ್ತಗಿರಿ ಸಾಬ್, ಕದಿರಿ ಮತ್ತು ತಂಡದವರಿಂದ ಹರಿಕಥೆ ಮತ್ತು ರಾತ್ರಿ 10 ಗಂಟೆಗೆ ವೆಂಕಟಮುನಿಯಪ್ಪ ಮತ್ತು ತಂಡದವರಿಂದ ಬುರ್ರಕಥೆ ಕಾರ್ಯಕ್ರಮ ಆಯೋಜಿಸಲಾಗಿದೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur