Chintamani : ಭಾನುವಾರ ಹುಣ್ಣಿಮೆ ಅಂಗವಾಗಿ ಐತಿಹಾಸಿಕ ಯಾತ್ರಾ ಸ್ಥಳವಾಗಿರುವ ಕೈವಾರ (Kaiwara) ದ ಯೋಗಿನಾರೇಯಣ ಮಠ (Kaiwara Yogi Nareyana Mutt) ದಲ್ಲಿ ವಿಶೇಷ ಪೂಜೆ, ರಥೋತ್ಸವ ನಡೆಯಿತು.
ಹುಣ್ಣಿಮೆ ಪೂಜೆಗಾಗಿ ಪೀಠವನ್ನು ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣಸ್ವಾಮಿ ಹಾಗೂ ತಾತಯ್ಯನವರ ಉತ್ಸವ ಮೂರ್ತಿ ಕುಳ್ಳರಿಸಿ ತಾತಯ್ಯನವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ಪಲ್ಲಕ್ಕಿದಲ್ಲಿ ಪ್ರತಿಷ್ಠಾಪಿಸಲಾಯಿತು.
ಭಕ್ತರು ಪಲ್ಲಕ್ಕಿ ಹೊತ್ತು ದೇವಾಲಯದ ಸುತ್ತ ರಥೋತ್ಸವ ನಡೆಸಿ ನಂತರ ಶಾಸ್ತ್ರೋಕ್ತವಾಗಿ ಉತ್ಸವಮೂರ್ತಿಯನ್ನು ಸ್ವಸ್ಥಾನಕ್ಕೆ ತಂದಿಡಲಾಯಿತು. ನಾದಸುಧಾರಸ ವೇದಿಕೆಯಲ್ಲಿ ಹುಣ್ಣಿಮೆ ಪ್ರಯುಕ್ತ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು. ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತ ಸಂಕೀರ್ತನೆ ನಡೆಸಿಕೊಟ್ಟರು.