Chintamani : ಚಿಂತಾಮಣಿ ತಾಲ್ಲೂಕಿನ ಕೈವಾರ (Kaiwara) ಕ್ಷೇತ್ರದ ಯೋಗಿನಾರೇಯಣ ಮಠದ (Sri Kaivara Yogi Nareyana Mutt) ಸಂಕೀರ್ತನಾ ಮಂದಿರದಲ್ಲಿ ಯೋಗಿ ನಾರೇಯಣ ತಾತಯ್ಯನವರ 187ನೇ ಆರಾಧನಾ (Kaiwara Yogi Nareyana Aradhana) ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಲೋಕ ಕಲ್ಯಾಣಾರ್ಥವಾಗಿ ಅಷ್ಟಾಕ್ಷರೀ ಹೋಮದೊಂದಿಗೆ ಗಣಪತಿ, ನವಗ್ರಹ ಹೋಮಗಳನ್ನು ಅರ್ಚಕ ವೃಂದದವರು ನೆರೆವೇರಿಸಿದರು.
ಹೋಮದ ನಂತರ ನೂರಾರು ಸಾಧು ಸಂತರ ಸಮೂಹದಲ್ಲಿ ಹೋಮ ನೆಡೆದ ನಂತರ ಅಷ್ಟಾವಧಾನ ಸೇವೆಯನ್ನು ಹಾಗೂ ಪೂರ್ಣಾಹುತಿ ಸಲ್ಲಿಸಿ, ಮಹಾಮಂಗಳಾರತಿ ಸಮರ್ಪಿಸಲಾಯಿತು.
ಮಠದ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ ದಂಪತಿ, ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ (Dr. M R JAYARAM), ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್ ಮತ್ತು ಅನೇಕ ಮಠದ ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.