Home Sidlaghatta ಕಾಳನಾಯಕನಹಳ್ಳಿಯ ಶ್ರೀಬಸವೇಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ

ಕಾಳನಾಯಕನಹಳ್ಳಿಯ ಶ್ರೀಬಸವೇಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ

0

Kalanayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದ ಶ್ರೀಬಸವೇಶ್ವರ ದೇವಾಲಯದ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪೂಜೆ ಹೋಮ ಹವನ ನಡೆಸಿ ಮಹಾ ಮಂಗಳಾರತಿ ಮಾಡಿ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಶ್ರೀಬಸವೇಶ್ವರ ಸ್ವಾಮಿಯ ಮೂರ್ತಿಗೆ ವಿಶೇಷ ಹೂವು ಹಾಗೂ ವಸ್ತ್ರದ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಭಕ್ತರ ಕುಟುಂಬದವರು ದಂಪತಿ ಸಮೇತ ಹೋಮ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು.

ಹೂವಿನ ಚಂಡಿನಾಟ ನಡೆಯಿತು. ನಾದಸ್ವರದೊಂದಿಗೆ ದೇವಾಲಯದ ಸುತ್ತಲೂ ಉತ್ಸವ ಮೂರ್ತಿಯ ಪ್ರದರ್ಶನ, ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.

ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಎಸ್‌.ಎನ್ ಕ್ರಿಯಾ ಟ್ರಸ್ಟ್‌ನ ಪುಟ್ಟು ಆಂಜಿನಪ್ಪ, ಕೆ.ಗುಡಿಯಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕಾಳನಾಯಕನಹಳ್ಳಿ ಭೀಮೇಶ್, ಕಾಳನಾಯಕನಹಳ್ಳಿ ಗ್ರಾಮಸ್ಥರು, ದೇವಾಲಯದ ಕುಲ ಬಂಧುಗಳು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version