21.1 C
Bengaluru
Monday, October 14, 2024

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕನಕದಾಸ ಜಯಂತಿ ಆಚರಣೆ

- Advertisement -
- Advertisement -

ಚಿಕ್ಕಬಳ್ಳಾಪುರ :

Chikkaballapur Kanakadasa jayanthi

Chikkaballpur : ಚಿಕ್ಕಬಳ್ಳಾಪುರ ನಗರದ ಗಂಗಮ್ಮಗುಡಿ ರಸ್ತೆಯಲ್ಲಿನ ಕನಕದಾಸ ಕುರುಬರ ಸಂಘದ ಕೇಂದ್ರ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕನಕದಾಸರು ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭಕ್ತಿಭಾವ, ವೈರಾಗ್ಯಗಳನ್ನು ಸಾರಿ ಸಮಾಜವನ್ನು ಜಾಗೃತಿಗೊಳಿಸಿದರು. ನವ ಸಮಾಜ ನಿರ್ಮಾಣ ಮಾಡಲು ನಕದಾಸರ ಚಿಂತನೆ, ತತ್ವ ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುರುಬ ಸಮುದಾಯದ ತಾಲ್ಲೂಕು ಅಧ್ಯಕ್ಷ ಎಂ.ಶ್ರೀನಿವಾಸ್ ಕಾರ್ಯಕ್ರಮದಲ್ಲಿ ತಿಳಿಸಿದರು.

ಕುರುಬ ಸಮುದಾಯದ ಗೌರವಾಧ್ಯಕ್ಷ ಸಿ.ರಾಮಕೃಷ್ಣಪ್ಪ, ಕುರುಬರ ಸಂಘ ಜಿಲ್ಲಾಧ್ಯಕ್ಷ ರಾಮಚಂದ್ರ, ತಾಲ್ಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಆನಂದ್, ಕಾರ್ಯದರ್ಶಿ ಕೆಂಪರಾಜ್, ನಿರ್ದೇಶಕ ಶ್ರೀನಿವಾಸ್, ಶಿವಕುಮಾರ್, ಪಿ.ಪ್ರಕಾಶ್, ಎಂ.ಎನ್.ನಾರಾಯಣಸ್ವಾಮಿ, ಎಸ್.ಶ್ರೀನಿವಾಸ್, ಶ್ರೀನಿವಾಸ್, ಮುನಿರಾಜು, ಮುರಳಿ, ಮುಖಂಡ ಡಾ.ರಾಮು, ಸುಮಿತ್ರಮ್ಮ, ರಂಗಪ್ಪ, ಎಂ.ಲಕ್ಷ್ಮಯ್ಯ, ಕನಕದಾಸ ನೌಕರರ ಸಂಘ, ಕನಕ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸಂಗೊಳ್ಳಿ ಯುವಸೇನೆಯ ಪದಾಧಿಕಾರಿಗಳು, ಮಹಿಳಾ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ಕನಕದಾಸ ಜಯಂತಿ ಆಚರಿಸಿದರು. ಕಾರ್ಯಕ್ರಮದಲ್ಲಿ ಎನ್.ವಿನಯ್ ಶಾಮ್ ಭಾಗಿಯಾಗಿದ್ದರು.

ಗುಡಿಬಂಡೆ :

Gudibande Kanakadasa Jayanthi

Gudibande : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಸಿಗ್ಬತ್ತುಲ್ಲಾ ” ಕನಕದಾಸರು ಭಕ್ತಿ ಶ್ರೇಷ್ಠತೆಯ ಪರಾಕಾಷ್ಠೆಯನ್ನು ಮೀರಿ ನಿಂತವರು. ತಮ್ಮ ಉತ್ತಮ ಸೇವೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಕನಕ ನಾಯಕ ಎಂದು ಕರೆಸಿಕೊಂಡು, ಕೀರ್ತನಕಾರರಾಗಿ ಹೊರಹೊಮ್ಮಿ ಸಮಾಜದ ಅಂಕುಡೊಂಕು ತಿದ್ದಲು ಕನಕರು ಮುಂದಾದರು ” ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಟಿಪಿಒ ಪ್ರಕಾಶ್, ತಾ.ಪಂ. ಇ.ಒ ರವೀಂದ್ರ, ಬಿಸಿಎಂ ಅಧಿಕಾರಿ ರಾಮಯ್ಯ, ಮುಖಂಡ ಮಹದೇವಯ್ಯ, ಅಶ್ವತ್ಥಗೌಡ, ಗಂಗರಾಜು, ವೆಂಕಟಶಿವಪ್ಪ, ಶಿವ, ಆದಿನಾರಾಯಣಪ್ಪ, ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗೌರಿಬಿದನೂರು :

Gauribidanur Kanakadasa jayanthi

Gauribidanur : ಗೌರಿಬಿದನೂರಿನ ಕನಕ ವೃತ್ತದಲ್ಲಿ ಕನಕ ಜಯಂತಿಯ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ಕೆ.ಎಚ್.ಪುಟ್ಟಸ್ವಾಮಿಗೌಡ ” ಕನಕದಾಸರ ಆದರ್ಶ ಸಾರ್ವಕಾಲಿಕ, ಸಮಾಜದ ಒಳಿತಿಗಾಗಿ ಜನರಲ್ಲಿ ಸಮಾನತೆ ಮತ್ತು ಸೋದರತ್ವ ಭಾವನೆಯನ್ನು ಬೆಳೆಸಲು ಕನಕದಾಸರು ಮುಂದಾದರು. ಇಡೀ ಸಮಾಜದಲ್ಲಿ ಬದಲಾವಣೆಯನ್ನು ಬಯಸಿ ತನ್ನ ವೈರಾಗ್ಯತನದಿಂದ ನಾಡಿನ ಉದ್ದಗಲಕ್ಕೂ ಸಂಚರಿಸಿ ಜಾತಿ ಧರ್ಮಗಳ ಕೂಪದಲ್ಲಿ‌ ಬದುಕುವ ಜನರಿಗೆ ಜಾಗೃತಿ ಮೂಡಿಸಿದರು.ಜನರಲ್ಲಿ ಧಾರ್ಮಿಕತೆ‌ ಮತ್ತು ವೈಚಾರಿಕತೆಯ ಅರಿವು ಮೂಡಿಸಲು ಕನಕದಾಸರು ಶ್ರಮಿಸಿದ್ದಾರೆ.” ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಮುಖಂಡ ಜೆ.ಕಾಂತರಾಜು, ಬಲರಾಂ, ಮೈಲಾರಪ್ಪ, ಅಶ್ವತ್ಥಪ್ಪ, ಚಿಕ್ಕಗಂಗಪ್ಪ, ಶ್ರೀನಾಥ್, ಬಾಲಕೃಷ್ಣ, ಗೋಪಾಲಗೌಡ, ನಾರಾಯಣಗೌಡ, ಅಬ್ದುಲ್ಲಾ, ರಂಗನಾಥರೆಡ್ಡಿ, ಲಕ್ಷ್ಮಿಪತಿ, ನಾಗರಾಜು, ಕೆ.ಸೋಮಶೇಖರ್, ನಾರಾಯಣಸ್ವಾಮಿ, ಡಿ.ಡಿ.ಹನುಮಂತರಾಯಪ್ಪ, ಮುನಿಯಪ್ಪ ಉಪಸ್ಥಿತರಿದ್ದರು.

ಶಿಡ್ಲಘಟ್ಟ :

Sidlaghatta Kanakadasa Jayanthi

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.

ಸಾಮಾಜಿಕವಾಗಿ ಕೆಳವರ್ಗದಿಂದ ಬಂದು ದಾಸದೀಕ್ಷೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ಹೊಸ ಆಯಾಮವನ್ನು ಕನಕದಾಸರು ಸೃಷ್ಟಿಸಿದರು. ಅಂದಿನ ಸಮಾಜದಲ್ಲಿನ ಮೌಡ್ಯಕಂದಾಚಾರ, ಪೊಳ್ಳುನಂಬಿಕೆ, ವರ್ಣವ್ಯವಸ್ಥೆಯ ವಿರುದ್ಧ ಖಂಡನೀಯವಾಗಿ ಕೀರ್ತನಾ ಸಾಹಿತ್ಯದ ಮೂಲಕ ಜನರಿಗೆ ಅರಿವು ಮೂಡಿಸಿದವರಲ್ಲಿ ಕನಕದಾಸರು ಪ್ರಮುಖರು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಂದ ಕೀರ್ತನೆಗಳ ಗಾಯನ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಶಿವಶಂಕರಪ್ಪ, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಪದ್ಮಮ್ಮ, ಗುತ್ತಿಗೆದಾರ ದೇವರಾಜು, ಎಸ್‌ಡಿಎಂಸಿ ಸದಸ್ಯ ನಾರಾಯಣಸ್ವಾಮಿ, ರತ್ನಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ದೊಡ್ಡಮುನಿವೆಂಕಟಶೆಟ್ಟಿ, ಚಿಕ್ಕಮುನಿವೆಂಕಟಶೆಟ್ಟಿ, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥಗೌಡ, ಕುರುಬರ ಸಂಘದ ಪೂಜಾರಪ್ಪ, ಆಂಜಿನಪ್ಪ, ಗೋಪಾಲ್, ಭರತ್, ಆನಂದಪ್ಪ, ನಾರಾಯಣಸ್ವಾಮಿ, ಶಿಕ್ಷಕರು ಹಾಜರಿದ್ದರು.

ಬಾಗೇಪಲ್ಲಿ :

ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ನೇತೃತ್ವದಲ್ಲಿ ಸೋಮವಾರ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. .

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರರು ಮಹನೀಯರ ದಿನಾಚರಣೆ ಆಚರಿಸುವುದರ ಜತೆಗೆ ಅವರ ಆದರ್ಶ, ನಡೆ-ನುಡಿಗಳನ್ನು ರೂಢಿಸಿಕೊಂಡು ನವ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ರೇಷ್ಮೆ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ, ತಾಲ್ಲೂಕು ಪಂಚಾಯಿತಿ ಇಒ ಎಚ್.ಎನ್.ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ, ಆರ್.ಹನುಮಂತರೆಡ್ಡಿ, ತಾಲ್ಲೂಕು ಸಾಕ್ಷರತಾ ಅಧಿಕಾರಿ ಎನ್.ಶಿವಪ್ಪ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ಪ್ರೇಮಾಚಂದ್ರಪ್ಪ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಎ.ಶ್ರೀನಾಥ್, ಖಜಾಂಚಿ ಗಂಗಾಧರ, ಚಂದ್ರಪ್ಪ, ಕಾರಕೂರಪ್ಪ, ಬಾಬು, ಶ್ರೀನಿವಾಸ್, ಎಸ್.ವಿ.ವೆಂಕಟರವಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!