Chikkaballapur : ಸೋಮವಾರ ಚಿಕ್ಕಬಳ್ಳಾಪುರ ಬಳಿರುವ ನಾಗಾರ್ಜುನ ಕಾಲೇಜಿ (Nagarjuna College)ನಟ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ” ವಿದ್ಯಾರ್ಥಿ ಜೀವನ ಎಂದೂ ಮರೆಯಲಾಗದ ಜೀವನ, ನಾನು ಶಾಲೆಯ ದಿನಗಳಲ್ಲಿ ಬಹಳ ಮೌನವಾದ ಹುಡುಗನಾಗಿದ್ದೆ ನಂತರ ಕಾಲೇಜಿನಲ್ಲಿ ತರಲೆ ಸ್ವಭಾವದವನಾದೆ. ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ದೊಡ್ಡ ಸ್ಥಾನಮಾನ ಪಡೆದಿದ್ದಾರೆ. ಡಿಸೆಂಬರ್‌ನಲ್ಲಿ ನನ್ನ ನಟನೆಯ ರೈಡರ್ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು ಸಿನಿಮಾ ನೋಡಿ ಜನರೇ ವಿಮರ್ಶೆ ಮಾಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಜತೆ ನನಗೆ ಉತ್ತಮವಾದ ಸಂಬಂಧವಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜನರಿಗೆ ತಲುಪಿಸುವುದು ನಮ್ಮ ಗುರಿ” ಎಂದು ಹೇಳಿದರು.
ನಾಗಾರ್ಜುನ ಕಾಲೇಜಿನ ನಿರ್ದೇಶಕ ಎಸ್.ಜೆ.ಗೋಪಾಲಕೃಷ್ಣ, ಪ್ರಾಂಶುಪಾಲ ಜಿತೇಂದ್ರನಾಥ್, ಭಾನುಚೈತನ್ಯ ವರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur