Kolar : ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಅಹಿಂದ ಚಳವಳಿ ಮತ್ತು ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಹಿಂದ ಸಮುದಾಯಗಳ ಪ್ರಮುಖರ ಮತ್ತು ಸಂಘಟನೆಯ ಕಾರ್ಯಕರ್ತರ ಸಭೆಯನ್ನು (Ahinda Meeting) ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ ಹಾಗೂ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ “ಬಹುಸಂಖ್ಯಾತರಾಗಿದ್ದರೂ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಂಘಟನೆಯಲ್ಲಿ ಹಿಂದುಳಿದಿರುವ ಅಹಿಂದ ವರ್ಗವನ್ನು ಮೇಲೆತ್ತುವುದು ಅಹಿಂದ ಚಳವಳಿಯ ಆಶಯವಾಗಿದ್ದು ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರಿಗೆ ರಾಜಕೀಯ ಶಕ್ತಿಯೂ ಇಲ್ಲ, ಆರ್ಥಿಕ ಶಕ್ತಿಯೂ ಇಲ್ಲ. ಹೆಚ್ಚಿನ ಸಂಪತ್ತು ಹಾಗೂ ರಾಜಕೀಯ ಶಕ್ತಿ ಲಿಂಗಾಯತರು ಮತ್ತು ಒಕ್ಕಲಿಗರ ಬಳಿಯೇ ಇದೆ. ಇನ್ನು ಅಧಿಕಾರಿ ವರ್ಗ, ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು, ಮಾಧ್ಯಮದಲ್ಲಿರುವವರು ಹೆಚ್ಚಿನವರು ಬ್ರಾಹ್ಮಣರೇ ಆಗಿರುತ್ತಾರೆ. ಅಂಬೇಡ್ಕರ್ ಅವರಿಂದಾಗಿ ನಮಗೆ ಶಿಕ್ಷಣ ಸಿಗುತ್ತಿದ್ದು, ಮೂರು ಹೊತ್ತು ಊಟ ಮಾಡಲು ಸಾಧ್ಯವಾಗುತ್ತಿದೆ ಅಷ್ಟೇ” ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಲ್.ಎ. ಮಂಜುನಾಥ್, ಸಂಚಾಲಕ ವೆಂಕಟೇಶ್ ಗೌಡ, ದಾಸ್ ಪ್ರಕಾಶ್, ಅಶೋಕ್ ಕುಮಾರ್, ಒಬಿಸಿ ಮಂಜುನಾಥ್, ಪ್ರಸಾದ್ ಬಾಬು, ಸಲಾಲುದ್ದೀನ್ ಬಾಬು ಮತ್ತಿತರರು ಉಪಸ್ಥಿತರಿದ್ದರು.