Home News Kolar ಜೆಡಿಎಸ್‌ ಕೆಟ್ಟ ಮನಸ್ಥಿತಿ ಇರುವ ಪಕ್ಷ : ಸಚಿವ ಬೈರತಿ ಸುರೇಶ್

ಜೆಡಿಎಸ್‌ ಕೆಟ್ಟ ಮನಸ್ಥಿತಿ ಇರುವ ಪಕ್ಷ : ಸಚಿವ ಬೈರತಿ ಸುರೇಶ್

0
Kolar Lokasabha Election Congress Meeting

Kolar : ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆ (Kolar Lokasabha Election) ಹಿನ್ನೆಲೆಯಲ್ಲಿ ಕೋಲಾರ ನಗರದ ನಂದಿನಿ ಪ್ಯಾಲೇಸ್‌ನಲ್ಲಿ ಮಂಗಳವಾರ ಕೋಲಾರ ವಿಧಾನಸಭೆ ಕ್ಷೇತ್ರದ Congress ಕಾರ್ಯಕರ್ತರ ಸಭೆ (Meeting) ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ ” ಜೆಡಿಎಸ್ ತನ್ನ ಅಸ್ತಿತ್ವಕ್ಕಾಗಿ ಹಾಗೂ ದುಡ್ಡು ಮಾಡಲು ಈ ಪಕ್ಷ ಬಿಜೆಪಿ ಜೊತೆ ಸೇರಿಕೊಂಡಿದ್ದು ಜೆಡಿಎಸ್‌ ಕೆಟ್ಟ ಮನಸ್ಥಿತಿ ಇರುವ ಪಕ್ಷ ಬಿಜೆಪಿಯದ್ದು ಭ್ರಷ್ಟ ಹಾಗೂ‌ ಕೋಮುವಾದಿ ಸರ್ಕಾರ. ಕ್ಷೇತ್ರಕ್ಕೆ ಒಂದೂ ರೂಪಾಯಿ ಅನುದಾನ ತಂದುಕೊಡದ ಯಾವುದಾದರೂ ಸಂಸದ ಇದ್ದರೆ ಅದು ಕೋಲಾರ‌ ಸಂಸದ ಮುನಿಸ್ವಾಮಿ ಮಾತ್ರ. ಮುನಿಸ್ವಾಮಿ ಇದ್ದ ಕಾರಣ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ 10 ವರ್ಷ ಹಿಂದೆ ಹೋಗಿದೆ. ಗೌತಮ್ ಗೆದ್ದರೆ‌ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಲಿದೆ” ಎಂದು ತಿಳಿಸಿದರು.

ಮುಖ್ಯಮಂತ್ರಿ ‌ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್,‌ ಶಾಸಕ ‌ಕೊತ್ತೂರು ಮಂಜುನಾಥ್‌, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ‌ಸದಸ್ಯ ಎಂ.ಎಲ್.ಅನಿಲ್ ‌ಕುಮಾರ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version