HomeManchenahalliಮಂಚೇನಹಳ್ಳಿಯಲ್ಲಿ ಕನಕ ಜಯಂತ್ಯೋತ್ಸವ

ಮಂಚೇನಹಳ್ಳಿಯಲ್ಲಿ ಕನಕ ಜಯಂತ್ಯೋತ್ಸವ

- Advertisement -
- Advertisement -
- Advertisement -
- Advertisement -

Manchenahalli : ಮಂಚೇನಹಳ್ಳಿ ಪಟ್ಟಣದಲ್ಲಿ ಭಾನುವಾರ ಶ್ರೀ ಕನಕದಾಸ ಕುರುಬರ ಸಂಘದ ವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತ್ಯೋತ್ಸವ-2023 (Kanakadasa Jayanthi) ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (K Sudhakar) “ಕನಕದಾಸರು ಯುದ್ಧ, ಸಾವು ನೋವುಗಳನ್ನು ಕಂಡು ವೈರಾಗ್ಯಕ್ಕೆ ಮರಳುತ್ತಾರೆ. ದೇವರಲ್ಲಿ ನಂಬಿಕೆ ಬಂದು ಅಂತಿಮವಾದ ಸಾಕ್ಷಾತ್ಕಾರ ಹೊಂದಿದ ಅವರು ಸಾಧಕರಲ್ಲಿ ಸಾಧಕರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಈಗಿನ ಸಂಪುಟದಲ್ಲಿ ಈ ಸಮುದಾಯದ ಇಬ್ಬರು ಸಚಿವರಿದ್ದಾರೆ ಹಾಗೂ ಈ ಹಿಂದೆ ನಾಲ್ಕು ಮಂದಿ ಸಚಿವರಿದ್ದರು. ಒಂದೇ ಸಮಯದಲ್ಲಿ ಆ ಸಮುದಾಯದ ನಾಲ್ಕು ಸಚಿವರು ಎಂದೂ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಇದೇ ತಿಂಗಳಿನಲ್ಲಿ ಕನಕದಾಸ ಸಮುದಾಯ ಭವನಕ್ಕೆ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿ ಆದೇಶಪತ್ರ ನೀಡಲಾಗುವುದು. ₹ 1 ಕೋಟಿ ಅನುದಾನದಲ್ಲಿ ಬೃಹತ್ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಮುಖಂಡ ವರ್ತೂರ್ ಪ್ರಕಾಶ್, ದೇವರಾಜ ಅರಸು ನಿಗಮದ ನಿರ್ದೇಶಕ ವೆಂಕಟೇಶ್, ಶಿವಪ್ಪ, ಸುಮಿತ್ರಮ್ಮ, ಸಿದ್ದಣ್ಣ, ನರಸಿಂಹಮೂರ್ತಿ, ರಾಜೇಶ್, ಗಂಗಾಧರಪ್ಪ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!
Exit mobile version