Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮ (Sathya Sai Grama, Muddenahalli) ದಲ್ಲಿ ಸತ್ಯಸಾಯಿಬಾಬಾ ಅವರ 96ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿರುವ ಭಾರತ ಸಂಗೀತ ಸಮ್ಮೇಳನ ಉದ್ಘಾಟಿಸಿ ಮಧುಸೂದನ ಸಾಯಿ ಅವರು ಮಾತನಾಡಿದರು.
ಸಂಗೀತಕ್ಕೆ ದೈವಿಕ ಶಕ್ತಿ ಇದೆ. ಜೀವನದಲ್ಲಿ ಸಂಗೀತವನ್ನು ಅಳವಡಿಸಿಕೊಂಡರೆ ಅಹಂಕಾರ ಮರೆ ಆಗುತ್ತದೆ. ಬಾಳಿನ ಅರ್ಥ ಅರಿವಾಗುತ್ತದೆ ಎಂದು ಅವರು ತಿಳಿಸಿದರು.
ಭಾರತದ ಸಂಸ್ಕೃತಿಯು ವೇದ, ನಾದ, ಕಾವ್ಯಗಳ ಮಿಲನವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪುನರ್ ಮನನ ಮಾಡಿ ಪ್ರಪಂಚದ ಶ್ರೇಷ್ಟ ಸಂಸ್ಕೃತಿಯನ್ನು ಜಗಕ್ಕೆ ಪಸರಿಸುವ ಉದ್ದೇಶ ಭಾರತ ಸಂಗೀತ ಸಮ್ಮೇಳನದ ಧ್ಯೇಯವಾಗಿದೆ ಎಂದು ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಅವರು ಹೇಳಿದರು.
ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಮಾತನಾಡಿ, ಸಂಗೀತ ಪಾರಮಾರ್ಥಿಕ ಜೀವನದ ಮಹತ್ವವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.
ಸಮ್ಮೇಳನದದಲ್ಲಿ ಸಂಗೀತ ವಿದ್ವಾಂಸರು ಕಛೇರಿಯನ್ನು ನಡೆಸಿಕೊಟ್ಟರು.
ಪ್ರಸಿದ್ಧ ಕೊಳಲು ವಾದಕ ಪಂಡಿತ ರೋನು ಮಜುಂದಾರ್, ಮೈಸೂರು ಮಂಜುನಾಥ್, ಶ್ರೀಕಂಠಮೂರ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur