Gauribidanur : ಗೌರೀಬಿದನೂರು ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಮುದುಗಾನುಕುಂಟೆ (Muduganakunte) ಶ್ರೀಗಂಗಾಭಾಗೀರಥಿ ದೇವಾಲಯದಲ್ಲಿ (Gangamma Temple) ಕೋವಿಡ್ ನಿರ್ಬಂಧಗಳ ನಡುವೆಯೂ ಭಕ್ತರು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ‘A’ ವರ್ಗದ ದೇವಾಲಯ ಇದಾಗಿದ್ದು, ಪ್ರತಿ ಸೋಮವಾರ ಮಾತ್ರ ಇಲ್ಲಿ ವಿಶೇಷ ಪೂಜಾ ಕೈಂಕಾರ್ಯಗಳು ನಡೆಯುತ್ತವೆ.
ಪ್ರಸ್ತುತ ಕೋವಿಡ್ 19 ರೂಪಾಂತರಿ ‘Omicron’ ಸಾಂಕ್ರಾಮಿಕವು ತೀವ್ರವಾಗಿ ಹರಡುತ್ತಿರುವುದರಿಂದ ದೇವಸ್ಥಾನದಲ್ಲಿ ಪ್ರತಿ ಸೋಮವಾರದ ವಿಶೇಷ ಪೂಜೆ ರದ್ದುಪಡಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರು . ಆದರೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಿಂದೂಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಭಕ್ತಾದಿಗಳು ದೇವಸ್ಥಾನದ ಹೊರಗಡೆ ಇರುವ ಅರಳಿ ಮರಕ್ಕೆ ಪೊಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡಿದ್ದಾರೆ.