Mulabagal: ಮಂಗಳವಾರ ಮುಳಬಾಗಿಲು ನಗರದ ನೂಗಲಬಂಡೆಯಲ್ಲಿ 16 ವರ್ಷದ ಬಾಲಕನೊಬ್ಬ ವಿದ್ಯುತ್ ತಂತಿ ತಗುಲಿ (Electric Shock) ಸ್ಥಳದಲ್ಲೇ ಸಾವನ್ನಪ್ಪಿದ (Boy Death) ಘಟನೆ ನಡೆದಿದೆ.
ಮೃತ ಬಾಲಕನನ್ನು ಸೈಯದ್ ಷಾಹಿದ್ ಎಂದು ಗುರುತಿಸಲಾಗಿದ್ದು, ಈತ ಕೆಜಿಎಫ್ ರಸ್ತೆಯ ಹೈದರ್ ವಳ್ಳಿ ದರ್ಗಾ ಮುಂಭಾಗದ ಮೈದಾನದ ಬಳಿ ಮನೆ ಕೆಲಸಕ್ಕೆ ಬಂದಿದ್ದ. ವೆಲ್ಡಿಂಗ್ ಕಾರ್ಯಕ್ಕಾಗಿ ಕಬ್ಬಿಣದ ಸಲಕರಣೆಗಳನ್ನು ಎತ್ತಿ ಇಡುತ್ತಿದ್ದ ವೇಳೆ ಮೇಲಿರುವ 11 ಕೆವಿ ವಿದ್ಯುತ್ ತಂತಿಗೆ ತಗಲಿದ ಪರಿಣಾಮ, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಲಾಗಿದೆ.
ಮುಳಬಾಗಿಲು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.