Mulabagal : ಮುಳಬಾಗಿಲು ಮುಳಬಾಗಿಲು ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಆಟೋದಲ್ಲಿ ಸಾಗಿಸುತ್ತಿದ್ದ ₹23 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು (Ganja Seize) ಇಬ್ಬರು ಆರೋಪಿಗಳನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಮಾಲೂರು ತಾಲ್ಲೂಕಿನ ವೆಂಕಟರಾಜನಹಳ್ಳಿಯ ಕೃಷ್ಣಮೂರ್ತಿ (44) ಹಾಗೂ ಕಡದನಹಳ್ಳಿ ಗ್ರಾಮದ ಮನೋಹರ( 26) ನೆರೆಯ ಆಂಧ್ರಪ್ರದೇಶದದಿಂದ ಆಟೊದಲ್ಲಿ ಸುಮಾರು 23.85 ಕೆಜಿ ತೂಕದ ಗಾಂಜಾ ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿಯ ಮೆರೆಗೆ ದಾಳಿ ಮಾಡಲಾಗಿದ್ದು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ, ಅಲ್ಲಾಲಸಂದ್ರದ ಬಳಿ ಗಾಂಜಾ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.