Mulabagal : ಮುಳಬಾಗಿಲು ತಾಲ್ಲೂಕಿನ ಕನ್ನಸಂದ್ರ (Kannasandra) ಗ್ರಾಮದಲ್ಲಿ ಶನಿವಾರ ಗಂಗಮ್ಮ ಹಾಗೂ ಸತ್ಯಮ್ಮ ಕರಗ (Karaga) ಮಹೋತ್ಸವ ಹಾಗೂ ದೀಪೋತ್ಸವ ಅದ್ದೂರಿಯಾಗಿ ನೆರವೇರಿತು.
ಕರಗದ ಪ್ರಯುಕ್ತ ದೇವರ ಮೂಲ ವಿಗ್ರಹಗಳನ್ನು ಅರಿಶಿನ, ಕುಂಕುಮ ಮತ್ತು ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪಂಚಾಮೃತ, ಮಹಾಮಂಗಳಾರತಿ, ಅಭಿಷೇಕ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಿತು. ಶನಿವಾರ ರಾತ್ರಿ ಕರಗವನ್ನು ದೇವಾಲಯದಿಂದ ಕರಗಧಾರಿ ತಲೆಯ ಮೇಲೆ ಹೊತ್ತು ಆಚೆ ಬರುತ್ತಿದ್ದಂತೆ ಸಾವಿರಾರು ಮಂದಿ ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು.