Home News Mulbagal | Mulabagilu ದ್ವಿಚಕ್ರ ವಾಹನ ಅಪಘಾತ ವ್ಯಕ್ತಿ ಮೃತ

ದ್ವಿಚಕ್ರ ವಾಹನ ಅಪಘಾತ ವ್ಯಕ್ತಿ ಮೃತ

0
Sidlaghatta Two Wheelers Accident

Mulabagilu : ಮುಳಬಾಗಿಲು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಹಳೆಕುಪ್ಪ ಗ್ರಾಮದ ಬಳಿ ಮಂಗಳವಾರ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ (Bike Accident) ಬಾಚಮಾಕಲಹಳ್ಳಿ ಗ್ರಾಮದ ರವಿ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮುಳಬಾಗಿಲು ಕಡೆಯಿಂದ ನಂಗಲಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅದೇ ರಸ್ತೆಗೆ ವಿರುದ್ಧವಾಗಿ ಮತ್ತೊಂದು ದ್ವಿಚಕ್ರ ವಾಹನ ತೊಂಡಹಳ್ಳಿ ಕಡೆಗೆ ಹೋಗುವಾಗ ಪರಸ್ಪರ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎಂದು ಹೇಳಲಾಗಿತ್ತಿದೆ. ಮತ್ತೊಂದು ವಾಹನದಲ್ಲಿದ್ದ ಮೂರು ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಗಿದ್ದು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version