Home News Chikkaballapur ಮಂಚೇನಹಳ್ಳಿಯಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮ

ಮಂಚೇನಹಳ್ಳಿಯಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮ

0
Namma Oorige Namma Shasakaru Manchenahalli

Manchenahalli : “ನಮ್ಮ ಊರಿಗೆ ನಮ್ಮ ಶಾಸಕರು” (Namma Oorige Namma Shasakaru) ಕಾರ್ಯಕ್ರಮ ನಿಮಿತ್ತ ಗುರುವಾರ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಪಿಡಚಲಹಳ್ಳಿ, ನುಲುಗುಮ್ಮನಹಳ್ಳಿ, ಹಾಗೂ ಜರಬಂಡಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಕೆಲವನ್ನು ಸ್ಥಳದಲ್ಲೇ ಪರಿಹಾರಗೊಳಿಸಿದರು. ಇನ್ನು ಕೆಲ ವಿಷಯಗಳಿಗೆ ಅಧಿಕಾರಿಗಳಿಗೆ ತಕ್ಷಣ ಸ್ಪಂದನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, “ನಾನು ಬಡತನದಿಂದ ಬಂದವನು. ಬಡವರ ಸಮಸ್ಯೆ ನನಗೆ ಗೊತ್ತು. ಅವರ ಮನೆಮನೆಗೆ ಹೋಗಿ ಸೌಲಭ್ಯಗಳನ್ನು ಒದಗಿಸುವುದು ನನ್ನ ಜವಾಬ್ದಾರಿ. ಈ ಕಾರ್ಯಕ್ರಮ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಪೂರ್ಣಗೊಂಡಿದ್ದು, ಉಳಿದ ಕೆಲ ಗ್ರಾಮಗಳಿಗೆ ಶೀಘ್ರದಲ್ಲೇ ಭೇಟಿ ನೀಡಲಾಗುವುದು. ಜನರ ಸಮಸ್ಯೆಗಳ ಪರಿಹಾರವೇ ನಮ್ಮ ಗುರಿ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಟಿಎಪಿಸಿಎಂಎಸ್ ನಿರ್ದೇಶಕ ನಾಗೇಶ್, ಡಾನ್ಸ್ ಶ್ರೀನಿವಾಸ್, ನಾಮನಿರ್ದೇಶನ ಸದಸ್ಯ ಡೇರಿ ಗೋಪಿ ಮತ್ತು ಇತರ ಪ್ರಮುಖರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version