ಚಿಕ್ಕಬಳ್ಳಾಪುರ: ಕರಹಳ್ಳಿ ಕ್ರಾಸ್‌ನಿಂದ ನಂದಿಬೆಟ್ಟಕ್ಕೆ ಸಾಗುವ ದಾರಿಯಲ್ಲಿ ಆಗಸ್ಟ್ 9ರಂದು ಹಮ್ಮಿಕೊಂಡಿರುವ ‘ದಿವ್ಯಶ್ರೀ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್’ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ.
Quick facts: The Nandi Hills Monsoon Marathon runs on August 9, flagged off at 6:30 AM near Nandi Betta, with 21.1 km half-marathon and 10 km run categories. The Karahalli Cross–Nandi Betta stretch will be fully closed to traffic from the previous night.
ಯಾರೆಲ್ಲಾ ಭಾಗವಹಿಸಲಿದ್ದಾರೆ?
ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೆಎಸ್‌ಆರ್‌ಪಿ ಎಡಿಜಿಪಿ ರವಿ ವಿ., ಮತ್ತು ವಿವೇಕ್ ಬಿ.ಸಿಂಗ್ ಪಾಲ್ಗೊಳ್ಳಲಿದ್ದಾರೆ. ನಂದಿಬೆಟ್ಟ ಸಮೀಪದ ಹೆಗ್ಗಡಿಹಳ್ಳಿಯ ದಿವ್ಯಶ್ರೀ ವಿಸ್ಪರ್ಸ್ ಆಫ್ ದಿ ವಿಂಡ್ ಬಳಿಯಿಂದ ಅಂದು ಬೆಳಿಗ್ಗೆ 6.30ಕ್ಕೆ ಮ್ಯಾರಥಾನ್‌ಗೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಎಷ್ಟು ದೂರದ ಓಟ?
21.1 ಕಿ.ಮೀ ಹಾಫ್ ಮ್ಯಾರಥಾನ್ ಮತ್ತು 10 ಕಿ.ಮೀ ಓಟವನ್ನು ಈ ಕಾರ್ಯಕ್ರಮ ಒಳಗೊಂಡಿದೆ. ದಿವ್ಯಶ್ರೀ ಡೆವಲಪರ್ಸ್ ಸಂಸ್ಥೆ ಈ ಓಟವನ್ನು ಆಯೋಜಿಸಿದೆ.
ಸಂಚಾರ ನಿರ್ಬಂಧ ಯಾವಾಗಿನಿಂದ?
ಮ್ಯಾರಥಾನ್ ಹಿನ್ನೆಲೆಯಲ್ಲಿ ಆಗಸ್ಟ್ 8ರ ರಾತ್ರಿ 11ರಿಂದ ಆಗಸ್ಟ್ 9ರ ಮಧ್ಯಾಹ್ನ 12ರವರೆಗೆ ಕರಹಳ್ಳಿ ಕ್ರಾಸ್‌ನಿಂದ ನಂದಿಬೆಟ್ಟಕ್ಕೆ ಸಾಗುವ ದಾರಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರು ಪರ್ಯಾಯ ದಾರಿ ಬಳಸುವಂತೆ ಸೂಚಿಸಲಾಗಿದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
Stay tuned for more local updates.
