Chikkaballapur : ಶುಕ್ರವಾರ ಫೀಡರ್‌ಗಳಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುವ ಕಾರಣ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗವಿಗಾನಹಳ್ಳಿ, ಚದಲಪುರ, ಚಿನ್ನಂಡಹಳ್ಳಿ, ಕೊಳವನಹಳ್ಳಿ, ಬೊಮ್ಮನಹಳ್ಳಿ, ನಂದಿಕ್ರಾಸ್, ಸಿವಿ ಕ್ಯಾಂಪಸ್, ತುಮುಕಲಹಳ್ಳಿ, ಅರಸನಹಳ್ಳಿ, ಕೊತ್ತೂರು, ನಾಗಾರ್ಜುನ ಕಾಲೇಜ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಹಾಗೂ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ, ಬಿಸಲಹಳ್ಳಿ, ಪುರ, ಪಿ.ನಾಗೇನಹಳ್ಳಿ, ಭಕ್ತರಹಳ್ಳಿ, ಗಿಡಗಾನಹಳ್ಳಿ, ದ್ವಾರಗಾನಹಳ್ಳಿ, ಕೊಂಡೇನಹಳ್ಳಿ, ತೊಂಡೇಬಾವಿ, ಪೋತೇನಹಳ್ಳಿ, ಹಳೆಹಳ್ಳಿ, ಗೌಡಗೆರೆ, ವರವಣಿ, ಕಮಲಾಪುರ, ಕದಿರಿದೇವರಹಳ್ಳಿ, ಪಿಂಜಾರಲಹಳ್ಳಿ, ಚಿಕ್ಕಹೊಸಹಳ್ಳಿ, ಮೇಳ್ಯ, ಜಗರೆಡ್ಡಿಹಳ್ಳಿ, ರಾಮಚಂದ್ರಪುರ, ಗೌಡಸಂದ್ರ, ಉಚ್ಚೋದನಹಳ್ಳಿ, ಚಿಟ್ಟಾವಲಹಳ್ಳಿ, ದಿನ್ನೇನಹಳ್ಳಿ, ಹನುಮೇನಹಳ್ಳಿ, ಕೋಟಾಲದಿನ್ನೆ, ಹೋಸೂರು, ಸೋಮಶೆಟ್ಟಿಹಳ್ಳಿ, ಸೊನಗಾನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹುಲಿಕುಂಟೆ, ನರಸಾಪುರ, ಸೂರ್ಯನಾಯಕನಹಳ್ಳಿ, ಒಂಟಿಮನೆಹಳ್ಳಿ, ಬೋಡಬಂಡಹಳ್ಳಿ, ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಿಸಿದ್ದಾರೆ.