Home Sidlaghatta ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

0

Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಮಂಗಳವಾರ ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ದ ಪ್ರಯುಕ್ತ ಪದ್ಮಶಾಲಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ. ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಗ್ರಾಮದ ಸುತ್ತಮುತ್ತಲಿನ ಸುಮಾರು ಹಳ್ಳಿಗಳಿಂದ ಪಾನಕ, ಮಜ್ಜಿಗೆ ಎತ್ತಿನಗಾಡಿಗಳಲ್ಲಿ ತಂದು ವಿತರಿಸಲಾಯಿತು. ಸ್ಥಳೀಯ ಜಾಮಿಯ ಮಸೀದಿಯವರು ಭಕ್ತರಿಗೆ ಬಾಯಾರಿಕೆ ತನಿಸಲು ತಣ್ಣನೆಯ ನೀರಿನ ಬಾಟಲ್ ಗಳನ್ನು ಹಂಚಿಕೆ ಮಾಡಿದ್ದು ಸೌಹಾರ್ಧದ ವಿಶೇಷವಾಗಿತ್ತು. ಕೀಲುಕುದುರೆ, ಡೊಳ್ಳು ಕುಣಿತ, ವೀರಗಾಸೆ, ಹಲಗೆ ಬಾರಿಸುವ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡರು. ಕೆಲವು ಯುವಕ ಸಂಘದವರು ಬಂದಿರುವ ಭಕ್ತಾದಿಗಳಿಗೆ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರು ಸರಬರಾಜು ಮಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version