Chikkaballapur : ಓಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ (Pravati Parida) ಅವರು ತಾಲ್ಲೂಕಿನ ನಂದಿಗಿರಿಧಾಮಕ್ಕೆ (Nandi Hills) ಮಂಗಳವಾರ ಭೇಟಿ ನೀಡಿ ಮಧ್ಯಾಹ್ನ ನೆಹರೂ ನಿಲಯಯದ (Nehru House) VVIP ಕೊಠಡಿಯಲ್ಲಿ ತಂಗಿದರು.
ಓಡಿಶಾ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪ್ರವಾಸೋದ್ಯಮ ಸಚಿವರೂ ಆಗಿರುವ ಪ್ರವತಿ ಪರಿದಾ ಅವರು ನಂದಿಗಿರಿಧಾಮದ ಬಗ್ಗೆ ಮತ್ತು ಗಿರಿಧಾಮದಲ್ಲಿ ಇರುವ ವಸತಿ ಸಂಕೀರ್ಣಗಳ ಬಗ್ಗೆ ಮಾಹಿತಿ ಪಡೆದು “ಮಹನೀಯರು ತಂಗಿದ ಜಾಗದಲ್ಲಿ ನಾವು ತಂಗಿದ್ದೇವೆ. ಇದು ಖುಷಿಯ ವಿಷಯ” ಎಂದು ತಿಳಿಸಿದರು. ಇದೆ ಸಂದರ್ಬರ್ಭದಲ್ಲಿ ಮಯೂರ ಹೋಟೆಲ್‌ನ “ಊಟ ಮತ್ತು ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಹೋಟೆಲ್‌ನಲ್ಲಿ ಗುಣಮಟ್ಟವಿದೆ” ಎಂದು ಪ್ರಶಂಸಿಸಿದರು.
ನಂತರ ಗಿರಿಧಾಮದ ಸಭಾಂಗಣದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಭಾಸಿ ಓಡಿಯಾ ಪರಿವಾರವು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡರು. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಂದಿಗಿರಿಧಾಮದ ವ್ಯವಸ್ಥಾಪಕ ಮನೋಜ್ ಹಾಗೂ ಸಿಬ್ಬಂದಿ ಆತಿಥ್ಯ ನೀಡಿದರು.