Saturday, October 1, 2022
HomeNewsಹದಿನೈದು ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಹದಿನೈದು ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಹಾರಡಿ ಗ್ರಾಮದಲ್ಲಿ ರೇವಾ ವಿಶ್ವವಿದ್ಯಾಲಯದ (Reva University) ವಿದ್ಯರ್ಥಿಗಳೊಂದಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶ್ವವಿದ್ಯಾಲಯದ NSS ಸಂಯೋಜಕ ಬಿ.ಪಿ.ಮಧು ಮಾತನಾಡಿದರು.

“ರೇವಾ ಮನಮಹೋತ್ಸವ” ಎಂಬ ಘೋಷ ವಾಕ್ಯದೊಂದಿಗೆ ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮ್ ರಾಜು ಅವರ ಮಾರ್ಗದರ್ಶನದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ನೆರವನ್ನು ಪಡೆದು ಸರ್ಕಾರಿ ಜಾಗಗಳಲ್ಲಿ ಒಟ್ಟಾರೆಯಾಗಿ 15 ಸಾವಿರ ಗಿಡಗಳನ್ನು ನೆಡುವ ಯೋಜನೆಯಿದು.

ಹಸಿರು ಹಳ್ಳಿಗಳ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರ ಸಹಕಾರದೊಂದಿಗೆ ಇದು ನೂರು ಗಿಡಗಳನ್ನು ನೆಡುವ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಗಿಡಗಳನ್ನು ನೆಟ್ಟ ನಂತರ ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯವರು ಹೊರುತ್ತಿರುವುದು ಸಂತಸದ ಸಂಗತಿ. ಹಸುರೀಕರಣದ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರಲ್ಲಿ ಪರಿಸರ ಕಾಳಜಿಯನ್ನು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಕುಮಾರ್, ಸದಸ್ಯರಾದ ಬೈರೇಗೌಡ, ಮುನಿರಾಜು, ಗ್ರಾಮದ ಡಿ.ಪಿ.ಮುನಿರಾಜು, ರೇವಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಸಂಜಯ್ ಚಿಟ್ನಿಸ್, ಸಹ ನಿರ್ದೇಶಕರಾದ ಡಾ.ಅಶ್ವಿನ್ ಕುಮಾರ್ ಮೊತಾಗಿ, ಡಾ.ಮಲ್ಲಿಕಾರ್ಜುನ್ ಕೊಡಬಾಗಿ, ಎನ್.ಎಸ್.ಎಸ್ ಸಂಯೋಜಕರಾದ ಪ್ರಭುರಾಜ್, ಸುನಿಲ್ ಮನೋಲಿ, ಸುರೇಂದ್ರಬಾಬು, ಲಲಿತಾ, ವಿದ್ಯಾರ್ಥಿಗಳಾದ ಎಚ್.ವಿ.ಭರತ್, ಬಿ.ಆರ್.ಸುಹಾಸ್ ರೆಡ್ಡಿ, ಸುನಿಲ್ ಸೀರ್ವಿ, ಆರ್.ಪಿ.ವಿದ್ಯಾ ಸುಮನ್, ಟಿ.ಎಂ.ನಮ್ರತಾ, ವಿಸ್ಮಯ ಹಾಜರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

error: Content is protected !!