Gauribidanur : ಗೌರಿಬಿದನೂರು ತಾಲ್ಲೂಕು ಕಚೇರಿಯಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು (Savitha Maharshi Jayanthi) ಸರಳವಾಗಿ ಆಚರಿಸಲಾಯಿತು.
ಸವಿತಾ ಮಹರ್ಷಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಗ್ರೇಡ್- 2 ತಹಶೀಲ್ದಾರ್ ಆಶಾ “ದೇಶ ಹಲವಾರು ಸಂತರ, ಶರಣರ ದೇಶ. ಇಂತಹ ಮಹಾನ್ ವ್ಯಕ್ತಿಗಳನ್ನು ಕೇವಲ ಜಾತಿಗೆ ಸೀಮಿತಗೊಳಿಸಬಾರದು ಸವಿತಾ ಮಹರ್ಷಿ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸವಿತಾ ಸಮಾಜ ಸಮುದಾಯ ಇಂದಿಗೂ ಶ್ರಮದಾಯಕ ಜೀವನ ನಡೆಸುತ್ತಿದ್ದು ಶೈಕ್ಷಣಿಕ, ಆರ್ಥಿಕವಾಗಿ ಸದೃಢಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು” ಎಂದು ತಿಳಿಸಿದರು.
ತಾಲ್ಲೂಕು ಕಚೇರಿ ಸಿಬ್ಬಂದಿ ರವಿ ಕುಮಾರ್, ಶ್ರೀನಿವಾಸ್ ಜಿಲ್ಲಾಧ್ಯಕ್ಷರು, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಡಿ.ಶಿವಕುಮಾರ್, ಮುಖಂಡ ಶ್ರೀನಿವಾಸ ಗೌಡ, ಜಿ.ಡಿ.ಶಿವಕುಮಾರ್, ಜಿ.ಎಸ್.ನಾಗೇಶ್, ಎಚ್.ಎನ್ ರಮೇಶ್, ಶ್ರೀನಿವಾಸ್, ಮಂಜುನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.