Chikkaballapur District : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆಯವರ (Savitribai Phule) ಜನ್ಮದಿನವನ್ನು (Birth Anniversary) ಆಚರಿಸಲಾಯಿತು.
ಬಾಗೇಪಲ್ಲಿ
Bagepalli : ಚೇಳೂರಿನ ಸರ್ಕಾರಿ ಅನುದಾನಿತ ಜ್ಞಾನೋದಯ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ. ಈಶ್ವರರೆಡ್ಡಿ ” ಮಹಿಳಾ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ ಹೆಮ್ಮೆಯ ಮಹಿಳೆ ಸಾವಿತ್ರಿಬಾಯಿ ಫುಲೆ, ದೇಶದ ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಅವರ ಪಾತ್ರ ಮಹತ್ವದ್ದು. 1848ರಲ್ಲಿ ದೇಶದ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ಪುಣೆಯಲ್ಲಿ ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿರಾವ್ ಅವರು ತೆರೆದರು. ” ಎಂದು ಹೇಳಿದರು.
ಶಿಕ್ಷಕ ತಿರುಮಲೇಶ್, ಗೋವಿಂದ ನಾಯಕ್, ರವೀಂದ್ರ ಹಳ್ಳಿಕೆರೆ, ಭಾಸ್ಕರ, ಮಂಜುನಾಥ, ಶ್ರೀನಿವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿಂತಾಮಣಿ
Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ ಕೆಇಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ದೇವತಾದೇವರಾಜ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದೇವತಾದೇವರಾಜ್ ” ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷಿದ್ಧವಾಗಿದ್ದ ಕಾಲದಲ್ಲಿ ಸಮಾಜದ ಕಡು ವಿರೋಧದ ನಡುವೆಯೂ ತಮ್ಮ ಮನೆಯಿಂದಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ಆರಂಭಿಸಿ ಹೆಣ್ಣುಮಕ್ಕಳಿಗೆ ದೇಶದಲ್ಲಿ ಪ್ರಥಮವಾಗಿ ಅಕ್ಷರದ ದೀಪ ಬೆಳಗಿದ್ದರು. ಅವರ ಪ್ರತಿ ಹೋರಾಟಕ್ಕೂ ಅವರ ಪತಿ ಜ್ಯೋತಿ ಬಾಫುಲೆ ಬೆನ್ನೆಲುಬಾಗಿದ್ದರು ” ಎಂದು ಹೇಳಿದರು.
ಟಿಪಿಒ ಸುಂದರೇಶ್, ಮುಖ್ಯ ಶಿಕ್ಷಕ ರಮೇಶ್, ಶಿಕ್ಷಕರಾದ ಕೆ.ಎಂ. ನಾರಾಯಣಸ್ವಾಮಿ, ಹಿರೇಮಠ, ಕೃಷ್ಣಪ್ಪ, ಪುಷ್ಪಲತ, ಸುಧಾ, ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.
ಶಿಡ್ಲಘಟ್ಟ
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ, ಕ್ಲಸ್ಟರ್ ಹಂತದ ಮುಖ್ಯಶಿಕ್ಷಕರ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜನರ ವಿರೋಧದ ನಡುವೆಯೂ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದ ಸಾವಿತ್ರಿಬಾಯಿ ಫುಲೆ ಅಕ್ಷರಕ್ರಾಂತಿ ಮಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ತಾಯಿಯಾದರು ಎಂದು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ರಾಜೇಶ್ವರಿ ಉಜ್ರೇಕರ ಹೇಳಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾ ರೆಡ್ಡಿ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಸಿಆರ್‌ಪಿ ಎಂ.ರಮೇಶ್‍ಕುಮಾರ್, ಮುಖ್ಯಶಿಕ್ಷಕಿ ನೇತ್ರಾವತಿ, ಶಿಕ್ಷಕಿಯರಾದ ವಾಣಿಶ್ರೀ, ಪಿ.ಗೀತಾ, ಉಮಾದೇವಿ ಉಪಸ್ಥಿತರಿದ್ದರು.