Home Sidlaghatta SSLC ಯಲ್ಲಿ ಉತ್ತೀರ್ಣರಾದ ಅಂಧ ಮಕ್ಕಳಿಗೆ ಆರ್ಥಿಕ ನೆರವು

SSLC ಯಲ್ಲಿ ಉತ್ತೀರ್ಣರಾದ ಅಂಧ ಮಕ್ಕಳಿಗೆ ಆರ್ಥಿಕ ನೆರವು

0

Sidlaghatta : ಅಂಗವಿಕಲ ಮಕ್ಕಳಲ್ಲಿ ಅಗಾಧವಾದ ಬುದ್ದಿ ಮತ್ತು ಜ್ಞಾಪಕ ಶಕ್ತಿ ಇರಲಿದ್ದು ಅದನ್ನು ಗುರ್ತಿಸಿ ಅವರಿಗೆ ಅವಕಾಶಗಳನ್ನು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರಿಗೆ ಹೆಚ್ಚಿನ ತಾಳ್ಮೆ, ಸಹನೆ ಅಗತ್ಯ ಎಂದು ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ತಿಳಿಸಿದರು.

ನಗರದಲ್ಲಿನ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ನಡೆದ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಜಯಂತಿಯಲ್ಲಿ ಭಾಗವಹಿಸಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ಅಂಧ ಮಕ್ಕಳಿಗೆ ಎಬಿಡಿ ಟ್ರಸ್ಟ್‌ನಿಂದ ನಗದು ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ ಕ್ಷೇತ್ರ ಸೇರಿದಂತೆ ನಾನಾ ರಂಗಗಳಲ್ಲಿ ಅಂಧ ಮಕ್ಕಳು, ಅಂಗವಿಕಲರು ಅಗಾಧವಾದ ಸಾಧನೆ ಮಾಡಿದ್ದಾರೆ. ಅವರಿಗೆ ಆಸಕ್ತಿಗೆ ತಕ್ಕಂತೆ ಅವಕಾಶ, ಪ್ರೋತ್ಸಾಹ ನೀಡುವುದು ಮುಖ್ಯ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ 15 ಮಂದಿ ಅಂಗವಿಕಲ ವಿದ್ಯಾರ್ಥಿಗಳಿಗೆ ಎಬಿಡಿ ಟ್ರಸ್ಟ್‌ನಿಂದ ನಗದು ಪುರಸ್ಕಾರ ನೀಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಚಿಲಕಲನೇರ್ಪು ಬ್ಲಾಕ್ ಅಧ್ಯಕ್ಷ ಕೃಷ್ಣಾರೆಡ್ಡಿ, ನಗರಸಭೆ ಉಪಾಧ್ಯಕ್ಷ ಅಫ್ಸರ್‌ಪಾಷ, ಗುಡಿಹಳ್ಳಿ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಮಂಜುನಾಥ್, ಕೃಷ್ಣಮೂರ್ತಿ, ಕಾಂಗ್ರೆಸ್ ಯುವ ಘಟಕದ ನರೇಂದ್ರ, ಆನೂರು ರವಿಗೌಡ, ದೇವರಮಳ್ಳೂರು ರವಿ, ನವ ಜೀವನ ಸಂಸ್ಥೆಯ ಬೆಳ್ಳೂಟಿ ರಾಜಣ್ಣ, ಆಶಾಕಿರಣ ಸಂಸ್ಥೆಯ ಗೋಪಾಲ್, ಜಗದೀಶ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version