Sidlaghatta : ಒಂದರಿಂದ ಮತ್ತೊಂದು ಮುಂದಕ್ಕೆ ಹೋಗುವ ಭರದಲ್ಲಿ ಎರಡು ಕ್ಯಾಂಟರ್ ಗಳ ನಡುವೆ ಡಿಕ್ಕಿಯಾಗಿ ಕ್ಯಾಂಟರ್ ಗಳು ಮುಗುಚಿ ಬಿದ್ದಿವೆ.
ನಗರದ ಹೊರವಲಯದ ಅಮ್ಮನಕೆರೆಯ ಕಟ್ಟೆಯ ಮೇಲೆ ಭಾನುಮಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶಿರಾ ದಿಂದ ಚಿಂತಾಮಣಿ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಳ ನಡುವೆ ನಡೆದ ಈ ಅಪಘಾತದಲ್ಲಿ ಒಂದು ಕ್ಯಾಂಟರ್ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಯಿತು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಗಳನ್ನು ತರಿಸಿ ವಾಹಗಳನ್ನು ತೆರವು ಮಾಡಿಸಿದರು. ಅದುವರೆಗೂ ಒಮ್ಮುಖ ರಸ್ತೆಯಲ್ಲಿ ವಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.