Home Sidlaghatta ನಕಲಿ ವೈದ್ಯನ ಕ್ಲಿನಿಕ್ ಮುಚ್ಚಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

ನಕಲಿ ವೈದ್ಯನ ಕ್ಲಿನಿಕ್ ಮುಚ್ಚಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

0

Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ವೈದ್ಯ ಎಂದು ಹೇಳಿಕೊಂಡು ನಾಮ ಫಲಕವಿಲ್ಲದ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮಾತ್ರೆ, ಚುಚ್ಚು ಮದ್ದು ನೀಡುತ್ತಿದ್ದ ವೆಂಕಟಪ್ಪ ಎಂಬುವವರ ಅಂಗಡಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮುಚ್ಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ಆರೋಗ್ಯ ನಿರೀಕ್ಷಕ ದೇವರಾಜ್ ಇಬ್ಬರೂ ಆ ಅಂಗಡಿ ಮೇಲೆ ದಾಳಿ ಮಾಡಿದ್ದಾಗ ಸುಮಾರು 20 ಜನ ಚಿಕಿತ್ಸೆಗೆಂದು ಬಂದಿದ್ದರು. ಎಚ್ಚರಿಕೆ ನೀಡಿ ಆ ಕ್ಲಿನಿಕ್ ಹೆಸರಿನ ಅಂಗಡಿ ಬಂದ್ ಮಾಡಿಸಲಾಯಿತು.

ವೆಂಕಟಪ್ಪ ಅವರು ಈ ಹಿಂದೆ ಸಾದಲಿ ಸರ್ಕಾರಿ ಅಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರನಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಯಶ್ವಂತ ಪ್ರಸಾದ್ ಇದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version