Sidlaghatta : ದೇಶದ ಪ್ರಧಾನಿಯಾಗಿ 2004 ರಿಂದ 2014ರವರೆಗೆ ದೇಶವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್, ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಎ.ನಾಗರಾಜ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಆಹಾರ ಹಕ್ಕು ಕಾಯ್ದೆ, ಆರ್‌ಟಿಐ ಕಾಯ್ದೆ, ಸರ್ವ ಶಿಕ್ಷಣ ಅಭಿಯಾನ, ನರೇಗಾ ಯೋಜನೆ, ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದ್ದು ಸೇರಿದಂತೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಸರ್ವಾಂಗೀಣ ಅಭ್ಯುದಯಕ್ಕೆ ಶ್ರಮಿಸಿದ್ದ ಶ್ರೇಷ್ಠ ರಾಜನೀತಿಜ್ಞ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಟಿ.ಕೆ. ನಟರಾಜ್, ನಗರಸಭೆಯ ಮಾಜಿ ಅಧ್ಯಕ್ಷ ಅಫ್ಸರ್ ಪಾಷಾ, ರಾಜ್ ಕುಮಾರ್, ಶ್ರೀನಿವಾಸ್ , ರಿಯಾಸ್ ಪಾಷಾ, ಮೌಲಾ, ಮಹಮ್ಮದ್ ಹಫೀಜ್, ರಾಮಾಂಜಿ, ಅಲ್ತಾಫ್ ಹುಸೇನ್, ಸೈಯದ್ ಬಾಬಾ, ಎಲ್.ಮಧುಸೂದನ್, ಮಂಜುನಾಥ್, ನರಸಿಂಹಮೂರ್ತಿ ಹಾಜರಿದ್ದರು.