Sidlaghatta: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ 5 ಲಕ್ಷ ರೂ ಅನುದಾನ ನೀಡಿ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಸೋಮವಾರ ಸಮುದಾಯ ಶಾಸಕ ವಿ.ಮುನಿಯಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿ.ಮುನಿಯಪ್ಪ, ಸಮುದಾಯದ ಎಲ್ಲಾ ಮುಖಂಡರು ಸರ್ಕಾರದಿಂದ ಕೊಟ್ಟಿರುವ 5 ಲಕ್ಷ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಿ. ಎಲ್ಲರೂ ಒಗ್ಗಟ್ಟಿನಿಂದ ತ್ವರಿತವಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿಕೊಂಡು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಹೇಳಿದರು.
ಮಳ್ಳೂರು ಉಣ್ಣೆ ಮತ್ತು ನೇಕಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ ಆರ್ ಮುನಿಕೃಷ್ಣಪ್ಪ, ಕಾರ್ಯದರ್ಶಿ ಶ್ರೀ ರಾಮ್, ಎಸ್.ಎಫ್.ಸಿ.ಎಸ್ ಉಪಾಧ್ಯಕ್ಷ ನಾರಾಯಣಸ್ವಾಮಿ, ಗುತ್ತಿಗೆದಾರ ನಾಗರಾಜ್, ಶ್ರೀನಿವಾಸ್, ಆರ್. ನಿಶಾಂತ್, ಮಂಜುನಾಥ್, ಶ್ರೀನಿವಾಸರೆಡ್ಡಿ, ರಾಮಚಂದ್ರ, ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ, ನರಸಿಂಹಮೂರ್ತಿ ಹಾಜರಿದ್ದರು.