Sidlaghatta – ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕ್ ಅದಾಲತ್ (Lok Adalat) ನಲ್ಲಿ ಒಟ್ಟು 86 ಪ್ರಕರಣಗಳು ಇತ್ಯರ್ಥಗೊಂಡು 1 ಕೋಟಿ 13 ಲಕ್ಷ 34 ಸಾವಿರ 615 ರೂ ಪಾವತಿಸಲಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್.ಎ.ಪಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು
ಚೆಕ್ ಪ್ರಕರಣಗಳು 25 ಇತ್ಯರ್ಥಗೊಂಡು, 68 ಲಕ್ಷ 97 ಸಾವಿರದ ಮುನ್ನೂರು ರೂ, 30 ಸಿವಿಲ್ ವ್ಯಾಜ್ಯಗಳಿಂದ 44,23,015 ರೂ, 31 ಕ್ರಿಮಿನಲ್ ವ್ಯಾಜ್ಯಗಳಿಂದ 14,300 ರೂ, ಸೇರಿದಂತೆ ಒಟ್ಟಾರೆಯಾಗಿ 1,13,34,615 ರೂಗಳು ಪಾವತಿಯಾದವು.
ಸರ್ಕಾರಿ ಶಾಲೆಯ 1,310 ಮಕ್ಕಳಿಗೆ ಜನ್ಮ ಪ್ರಮಾಣಪತ್ರವನ್ನು ಮಾಡಿಕೊಡಲಾಯಿತು. ಸಂಧಾನಕಾರರಾಗಿ ವಕೀಲರಾದ ಸಿ.ಕೆ.ವೆಂಕಟೇಶ್ ಬಾಬು, ರಾಮಕೃಷ್ಣ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಜಿ.ಸಿ.ಚಂದ್ರ, ಡಿ.ವಿ.ಸತ್ಯನಾರಾಯಣ್, ಎಸ್.ಕೆ.ನಾಗರಾಜ್, ಕೆ.ಮಂಜುನಾಥ್, ವಿ.ಎಂ.ಬೈರಾರೆಡ್ಡಿ ಹಾಜರಿದ್ದರು.