Home Sidlaghatta ಮಳ್ಳೂರು ಶ್ರೀನಾಗಲಮುದ್ದಮ್ಮ ದೇವಿಗೆ ಕ್ಷೀರಾಭಿಷೇಕ

ಮಳ್ಳೂರು ಶ್ರೀನಾಗಲಮುದ್ದಮ್ಮ ದೇವಿಗೆ ಕ್ಷೀರಾಭಿಷೇಕ

0

Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಶ್ರೀನಾಗಲಮುದ್ದಮ್ಮ ದೇವಿ ದೇವಾಲಯದಲ್ಲಿ ಭಾನುವಾರ ನಡೆದ ಕ್ಷೀರಾಭಿಷೇಕ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಳ್ಳೂರು ಮತ್ತು ಸುತ್ತಮುತ್ತಲಿನ 29 ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದರು.

ಗ್ರಾಮದ ಮುಖ್ಯ ದ್ವಾರದ ಶ್ರೀನಾಗಲಮುದ್ದಮ್ಮ ದೇವಿಗೆ ಹೂವಿನ ಅಲಂಕಾರ, ನಾನಾ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಾಯಿತು. ವೇದಪಾರಾಯಣದೊಂದಿಗೆ ಆರಂಭವಾದ ಈ ಉತ್ಸವದಲ್ಲಿ ಗಣಪತಿ ಪ್ರಾರ್ಥನೆ, ಕಳಶಾರಾಧನೆ, ಮತ್ತು ದೇವಾಲಯ ಆವರಣದಲ್ಲಿ ಹೋಮ-ಪೂರ್ಣಾಹುತಿ ಮೊದಲಾದ ವಿಧಿ ವಿಧಾನಗಳು ನೆರವೇರಿಸಲಾಯಿತು.

ಕಳಶ ಹೊತ್ತ ಮಹಿಳೆಯರು ದೇವಿಯ ಉತ್ಸವದೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿಂದ ಮೆರವಣಿಗೆ ನಡೆಸಿ, ಜನಪದ ಕಲಾ ತಂಡಗಳ ನಾದಸ್ವರ, ಡೋಲು, ಟಮಟೆ, ಹಾಗೂ ನೃತ್ಯಗಳ ಮೂಲಕ ಸಂಭ್ರಮ ಹೆಚ್ಚಿಸಿದರು.

ಈ ಕಾರ್ಯಕ್ರಮದಲ್ಲಿ ಮುತ್ತೂರು, ಬೋಡೇನಹಳ್ಳಿ, ಚಿಕ್ಕಬಳ್ಳಾಪುರ, ಡಿ.ಹೊಸೂರು, ದೇವನಹಳ್ಳಿ, ಬೆಂಗಳೂರು, ಕೋಲಾರ ಮೊದಲಾದ ಗ್ರಾಮ ಹಾಗೂ ಪಟ್ಟಣಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version