Mallur, Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಮಳ್ಳೂರಿನ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಪಂಚಮಿ ಜ್ಞಾನವಿಕಾಸ ಅಡಿಯಲ್ಲಿ, ಮಂಡ್ಯದ ಸೌದತ್ತ ಸಂಸ್ಕೃತಿಕ ಕಲಾತಂಡದಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೀದಿ ನಾಟಕ ಪ್ರದರ್ಶನದ ಮೂಲಕ ಸ್ವಚ್ಛತೆ, ನೀರು ಉಳಿಸುವಿಕೆ ಮತ್ತು ಬಾಲ್ಯ ವಿವಾಹದ ಕುರಿತಾಗಿ ಅರಿವು ಮೂಡಿಸಲಾಯಿತು.
ಯೋಜನಾಧಿಕಾರಿ ಸುರೇಶ್ ಗೌಡ ಜ್ಞಾನವಿಕಾಸದ ಯೋಜನೆಯ ಮಹತ್ವದ ಕುರಿತಾಗಿ ವಿವರಿಸಿದರು. ಜನಜಾಗೃತಿ ಸದಸ್ಯ ಎ.ಎಂ.ತ್ಯಾಗರಾಜ್ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹಾಗೂ ಬಾಲ್ಯವಿವಾಹದ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಒಕ್ಕೂಟ ಪದಾಧಿಕಾರಿಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ವಲಯದ ಮೇಲ್ವಿಚಾರಕ ಧನಂಜಯ ಹಾಜರಿದ್ದರು.