Sidlaghatta : ಮೇಲೂರು 66/11 KV ವಿದ್ಯುತ್ ಕೇಂದ್ರದ F-5 NJY ಹಾಗೂ ಜಂಗಮಕೋಟೆ 66/11 ಕೆವಿ ವಿದ್ಯುತ್ ಕೇಂದ್ರದ F-3 ಸುಗಟೂರು ಮತ್ತು F-6 ಬೈರೇಸಂದ್ರ ವಿದ್ಯುತ್ ಮಾರ್ಗಗಳ ವಾಹನ ಬದಲಾವಣೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಕಾರಣ ಈ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜಾಗುವ ಮೇಲೂರು, ಮಳ್ಳೂರು, ಮುತ್ತೂರು, ಸುಗಟೂರು, ಬೈರೇಸಂದ್ರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ಟೊಬರ್ 7 ರಿಂದ 10 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು BESCOM ಸಹಾಯಕ ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.