Saturday, July 27, 2024
HomeSidlaghattaರೈಲ್ವೆ ನಿಲ್ದಾಣದ ಬಳಿ ಬೆಳೆಸಿದ್ದ ಗಿಡಗಳಿಗೆ ಬೆಂಕಿ

ರೈಲ್ವೆ ನಿಲ್ದಾಣದ ಬಳಿ ಬೆಳೆಸಿದ್ದ ಗಿಡಗಳಿಗೆ ಬೆಂಕಿ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ (Railway Station) ಬಳಿ ರೈಲ್ವೆಗೆ ಸೇರಿರುವ ಸರಿಸುಮಾರು ಏಳು ಎಕರೆ ಪ್ರದೇಶದಲ್ಲಿ ಕೆ.ವಿ.ಟ್ರಸ್ಟ್ ( K. V. Trust) ಹಿರಿಯ ವಿದ್ಯಾರ್ಥಿಗಳು ಮತ್ತು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (Rajya Raita Sangha, Hasiru Sene) ಸದಸ್ಯರು ಒಂದು ಸಾವಿರ ಗಿಡ ನೆಟ್ಟಿದ್ದಾರೆ. ಸುಮಾರು ಎರಡು ವರ್ಷಗಳ ಈ ಸಾವಿರ ಗಿಡಗಳು ಭವಿಷ್ಯದಲ್ಲಿ ನಗರದ ಆಮ್ಲಜನಕ ಉತ್ಪಾದಿಸುವ ಹಸಿರ ಕಾಡಾಗಬೇಕು ಎಂಬ ಅವರ ಆಶಯಕ್ಕೆ ತೊಂದರೆಯುಂಟಾಗಿದೆ.

 ಕಿಡಿಗೇಡಿಗಳು ಅಲ್ಲಿ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಅನೇಕ ಗಿಡಗಳಿಗೆ ಹಾನಿಯಾಗಿದೆ. ಈ ಭಾಗದ ಜನರು ತಂದು ಸುರಿಯುವ ತ್ಯಾಜ್ಯ, ಮಲಮೂತ್ರ ವಿಸರ್ಜನೆಗೆ ಬರುವವರು ಬೀಡಿ ಸೇದುವವರು ಹಾಕುವ ಬೆಂಕಿ ಗಿಡ ಪೋಷಣೆಗೆ ಅಡ್ಡಿಯಾಗಿದೆ.

“ಹಿಂದೆ ಹಲವು ಎಕರೆಗಳಷ್ಟು ರೈಲ್ವೆ ಜಾಗ ಖಾಲಿಯಾಗಿತ್ತು. ಅದರಲ್ಲಿ ಊರ ಕಸ ಸುರಿಯಲಾಗುತ್ತಿತ್ತು. ನಿರ್ವಹಣೆ ಇಲ್ಲದ ಆ ಸ್ಥಳದಲ್ಲಿ ಕಳೆಗಿಡಗಳು, ಮುಳ್ಳುಕಂಟಿಗಳೆಲ್ಲಾ ಬೆಳೆದಿದ್ದವು. ಜೆಸಿಬಿ ಬಳಸಿ, ಕಸ ತೆಗೆದವು. ಗಿಡ ತರಲು ಹಣ ಬೇಕಿತ್ತು. ರೈತ ಸಂಘದವರು ನೆರವಾದರು. ಗಿಡಗಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಿತು. ನನ್ನೊಂದಿಗೆ ಓದಿದ ಕೆ.ವಿ.ಟ್ರಸ್ಟ್ ಹಳೆ ವಿದ್ಯಾರ್ಥಿಗಳು ಜತೆಗೂಡಿದರು. ರೈಲ್ವೆ ಅಧಿಕಾರಿ ಅನುಮತಿ ನೀಡಿದರು. ಹಾಗಾಗಿ 2019ರ ಆಗಸ್ಟ್ 25 ರಂದು ಮೊದಲ ಹಂತವಾಗಿ 300 ಸಸಿಗಳನ್ನು ನೆಡಲಾಯಿತು. ನವೆಂಬರ್‌ನಲ್ಲಿ 700 ಗಿಡಗಳನ್ನು ನಡಲಾಗಿದೆ” ಎಂದು ಈ ವನದ ಪ್ರಾರಂಭದ ಬಗ್ಗೆ ಪಿ.ಎಸ್. ಅನಿಲ್ ಕುಮಾರ್ ತಿಳಿಸಿದರು.

 “ಚರಂಡಿ ನೀರನ್ನು ಶೇಖರಿಸಿ, ಅದನ್ನು ಶುದ್ದೀಕರಿಸಿ ಗಿಡಗಳಿಗೆ ಹಾಯಿಸಲಾಗುತ್ತದೆ. ಗಿಡಗಳು ಹಾಗಾಗಿ ಸೊಂಪಾಗಿ ಬೆಳದಿವೆ. ಎಳಗಿಡಗಳನ್ನು ಕೆಲವರು ಮುರಿದರೆ, ಮೇಕೆ, ಕುರಿ ಮೇಯಿಸುವವರಿಂದ ಕಲವಾರು ಗಿಡಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಪೈಪ್ ಲೈನ್ ಗಳು ಹಸು ಎಮ್ಮೆಗಳ ಓಡಾಟದಿಂದ ಎಂದು ಹಾಳಾಗುತ್ತಿದ್ದವು. ಇಷ್ಟಾದರೂ ನಾವು ಹಾಕಿದವುಗಳಲ್ಲಿ ಶೇ 85 ರಷ್ಟು ಗಿಡಗಳನ್ನು ಉಳಿಸಿಕೊಂಡಿದ್ದೇವೆ ಎಂಬ ಖುಷಿ ಇದೆ. ಈಗ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ನಮಗೆ ತುಂಬಾ ನೋವಾಗಿದೆ” ಎಂದು ಅವರು ಹೇಳಿದರು.

 “ಸಂಸದ ಮುನಿಸ್ವಾಮಿ ಈ ಕಾರ್ಯ ಮೆಚ್ಚಿ, ಈ ಗಿಡಗಳ ಭದ್ರತೆಗೆ ಕಾಂಪೌಂಡ್ ನಿರ್ಮಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈಲ್ವೆಯವರು ಕಾಂಪೌಂಡ್ ಮಾಡಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿ ತ್ಯಾಜ್ಯ ಹಾಕುವುದನ್ನು ಅನಗತ್ಯ ಓಡಾಡುವುದನ್ನು ತಡೆಯಬೇಕಿದೆ. ಈಗ ರೈತ ಸಂಘದ ಮುಖಂಡರೊಂದಿಗೆ ರೈಲ್ವೆ ಅಧಿಕಾರಿಗಳು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತೇವೆ. ನಾವು ಕಷ್ಟಪಟ್ಟು ಗಿಡಗಳನ್ನು ಬೆಳೆಸುತ್ತಿರುವುದು ನಮ್ಮ ಊರಿನ ಅಭಿವೃದ್ಧಿಯ ಭಾಗವಾಗಿ” ಎಂದು ರೈತ ಮುಖಂಡ ಉಲ್ಲೂರುಪೇಟೆ ದೇವರಾಜ್ ತಿಳಿಸಿದರು.

For Daily Updates WhatsApp ‘HI’ to 7406303366

- Advertisement -
RELATED ARTICLES
- Advertisment -

Most Popular

error: Content is protected !!