Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಅಚ್ಚುಕಟ್ಟಿನ ಬಚ್ಚೇಗೌಡನ ಕೆರೆ ತುಂಬಿ ಕೋಡಿ ಹರಿದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ತಂಬಿಟ್ಟು ದೀಪ ಬೆಳಗಿ ಬಾಗಿನ ಅರ್ಪಿಸಿದರು.
ತಾಲ್ಲೂಕಿನ ಸದ್ದಹಳ್ಳಿ ಮತ್ತು ಟಿ.ಪೆದ್ದನಹಳ್ಳಿ ನಡುವೆ ಇರುವ ಬಚ್ಚೇಗೌಡನಕೆರೆಯು ಕೋಡಿ ಹರಿದಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿತ್ತು. ಬಂಡೆಮ್ಮನ ಕೆರೆಯ ಕೆಳಗೆ ಬರುವ ಬಚ್ಚೇಗೌಡನಕೆರೆಗೆ ಸುತ್ತಲಿನ ಸದ್ದಹಳ್ಳಿ, ಟಿ.ಪೆದ್ದನಹಳ್ಳಿ, ಚೌಡರೆಡ್ಡಿಹಳ್ಳಿ, ದೊಡ್ಡತೇಕಹಳ್ಳಿ, ಚಿಕ್ಕತೇಕಹಳ್ಳಿ ಗ್ರಾಮಸ್ಥರು ಸಂತಸದಿಂದಲೆ ಪೂಜೆ ಸಲ್ಲಿಸಿ ತಂಬಿಟ್ಟು ದೀಪ ಬೆಳೆಗಿ ಪುಷ್ಪ ನಮನ ಸಲ್ಲಿಸಿ ಬಾಗಿನ ಅರ್ಪಿಸಿದರು.
ಗ್ರಾಮದಿಂದ ಕೆರೆಯ ಕೋಡಿ ಹರಿವ ಕಟ್ಟೆಯವರೆಗೂ ತಮಟೆ ಮೇಳಗಳೊಂದಿಗೆ, ತಂಬಿಟ್ಟು ದೀಪಗಳನ್ನು ಮಹಿಳೆಯರು ಹೊತ್ತುಕೊಂಡು ಮೆರವಣಿಗೆ ಮೂಲಕ ಸಾಗಿದ ಗ್ರಾಮಸ್ಥರು ಅಲ್ಲಿ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸಿ ಪ್ರಸಾದ ಹಂಚಿದರು.
ಬಚ್ಚೇಗೌಡನಕೆರೆಯ ಕಟ್ಟೆಯ ಮೇಲೆ ಹೊಸದಾಗಿ ಗಂಗಮ್ಮ ದೇವಿಯ ಗುಡಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಿದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur