Sidlaghatta : ಶಿಡ್ಲಘಟ್ಟ ನಗರದ ಕೆ.ಎಚ್.ಬಿ ಕಾಲೋನಿಯ (KHB Colony) ಗಾಯತ್ರಿನಗರದಲ್ಲಿನ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಯಾಗ ಹಾಗೂ 24ನೇ ವರ್ಷದ ಶನೇಶ್ವರ ಜಯಂತಿ (Shaneshwara Jayanti), 108 ಲೀಟರ್ ಕ್ಷೀರಾಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಶನೇಶ್ವರ ಜಯಂತಿ ಪ್ರಯುಕ್ತ ಸಾಮೂಹಿಕ ಎಳ್ಳು ದೀಪೋತ್ಸವ, ಶನೇಶ್ವರಸ್ವಾಮಿಯ ಹೋಮ, ತೈಲಾಭಿಷೇಕ, 108 ಲೀಟರ್ ಹಾಲು ಮತ್ತು 108 ಲೀಟರ್ ಮೊಸರು ಅಭಿಷೇಕ, ಪಂಚಾಮೃತಾಭಿಷೇಕ, ಶಾಲ್ಯಾನ್ನ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ನಾಲ್ಕು ದಿನಗಳ ಕಾಲ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳು ಭಾನುವಾರ ಪ್ರಾರಂಭಗೊಂಡಿದ್ದು, ಬುಧವಾರದ ತನಕ ಸಾಗಲಿದೆ. ಈ ಪೂಜಾ ಕಾರ್ಯಗಳ ನಡುವೆ ಸೋಮವಾರ ಕೆ.ಎಚ್.ಬಿ. ಕಾಲೋನಿಯ ಮುಖ್ಯರಸ್ತೆಗಳಲ್ಲಿ ಬ್ರಹ್ಮರಥೋತ್ಸವದ ಮೆರವಣಿಗೆಯನ್ನು ಮಾಡಲಾಯಿತು. ನೂರಾರು ಭಕ್ತರು ನೆರೆದಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ತೀರ್ಥಂಕರ್, ಎನ್.ರಾಮಕೃಷ್ಣಪ್ಪ, ಪ್ರಕಾಶ್, ಸೀನಪ್ಪ, ಅರ್ಚಕರಾದ ವಿ.ಎನ್.ರಾಮಮೋಹನ್ ಶಾಸ್ತ್ರಿ, ಸತ್ಯನಾರಾಯಣರಾವ್, ಬಿ.ಕೃಷ್ಣಮೂರ್ತಿ, ಮಂಜುನಾಥ್ ಹಾಜರಿದ್ದರು.